ಸನ್ಮಾರ್ಗ ವಾರ್ತೆ
ಮುಂಬೈ,ಅ.26: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಸದುದ್ದೀನ್ ಉವೈಸಿ, ಪ್ರಕಾಶ್ ಅಂಬೇಡ್ಕರ್ ಜೊತೆ ಇದ್ದ ಮುಸ್ಲಿಂ ದಲಿತ ಮತಗಳು ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಸಖ್ಯದೆಡೆಗೆ ಮರಳಿ ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಹನ್ನೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಖ್ಯಕ್ಕೆ ಪ್ರಕಾಶ್ ಅಂಬೇಡ್ಕರ್ ಪಾರ್ಟಿ ವಂಚಿತ್ ಬಹುಜನ್ ಅಗಾಡಿ ಅಡ್ಡಗಾಲು ಹಾಕಿತ್ತು. ಈ ರೀತಿ ಸುಮಾರು ಅರುವತ್ತಕ್ಕೂ ಹೆಚ್ಚು ಸೀಟುಗಳಲ್ಲಿ ಕಾಂಗ್ರೆಸ್, ಎನ್ಸಿಪಿ ಸಖ್ಯಕ್ಕೆ ಅಗಾಡಿಗೆ ಅಡ್ಡಗಾಲಾಗುವ ಸಾಧ್ಯತೆ ಇತ್ತು.
ಆದರೆ ಒಂಬತ್ತು ಕಡೆ ಮಾತ್ರ ಮುಸ್ಲಿಂ, ದಲಿತ್ ಮತಗಳನ್ನು ಅಗಾಡಿಗೆ ಒಡೆಯಲು ಸಾಧ್ಯವಾಗಿದೆ. ಈ ಸಲ ಅಸದುದ್ದೀನ್ ಉವೈಸಿಯ ಎಐಎಂಐಎಂ ಅಗಾಡಿಯ ಸಖ್ಯದಿಂದ ದೂರ ಸರಿದದ್ದು ಕೂಡ ಅಗಾಡಿಗೆ ಹಿನ್ನಡೆಯಾಗಿದೆ.
ಅಸದುದ್ದೀನ್ ಪಾರ್ಟಿಗೆ ಎರಡು ಶಾಸಕರು ಸಿಕ್ಕಿದ್ದಾರೆ. ಅಗಾಡಿಗೆ ಒಂದು ಕಡೆ ಕೂಡ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಹತ್ತು ಕಡೆ ಎರಡನೆ ಸ್ಥಾನಕ್ಕೆ ತಲುಪಲು ಸಾಧ್ಯವಾಗಿದೆ. ಮುಂಬೈ ನಗರದ 36 ಸೀಟುಗಳಲ್ಲಿ ಕಾಂಗ್ರೆಸ್ ಎನ್ಸಿಪಿ ಸಖ್ಯ ಐದು ಸೀಟುಗಳನ್ನು ಮಾತ್ರ ಗೆದ್ದಿದೆ. ಮುಸ್ಲಿಂ ,ದಲಿತ್ ವಿಭಾಗ ನಿರ್ಣಾಯಕವಾದ ಹತ್ತು ಕ್ಷೇತ್ರಗಳಲ್ಲಿ ಎಂಟು ಕಡೆ ಮತದಾನ ಗಣನೀಯವಾಗಿ ಕಡಿಮೆ ಆಗಿತ್ತು. ಸಖ್ಯಕ್ಕೆ ಸಿಕ್ಕಿದ ನಾಲ್ಕು ಕ್ಷೇತ್ರ ಮುಸ್ಲಿಮರು ಬಹುಸಂಖ್ಯಾತರಾಗಿರುವ ಕ್ಷೇತ್ರವಾಗಿದೆ.
ಧಾರಾವಿಯಲ್ಲಿ ದಲಿತರು ನಿರ್ಣಾಯಕರಾಗಿದ್ದಾರೆ. ಎರಡು ಕಡೆಗೆ ಅಗಾಡಿ ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾಗಿದೆ. ದಲಿತರು ನಿರ್ಣಾಯಕರಾಗಿದ್ದ ಚೆಂಬೂರಿನಲ್ಲಿ ಕಾಂಗ್ರೆಸ್ 19,000 ಮತಗಳಿಂದ ಸೋಲುಂಡಿದೆ. ಇಲ್ಲಿ ಅಗಾಡಿ 23,178 ವೋಟುಗಳನ್ನು ಗೆದ್ದುಕೊಂಡಿದೆ. ಚಾಂದಿವಲಿಯಲ್ಲಿ ಕಾಂಗ್ರೆಸ್ಸಿನ ಆರಿಫ್ ನಸೀಂಖಾನ್ 409 ಮತಗಳ ಅಂತರದಿಂದ ಸೋತಿದ್ದಾರೆ. ಇಲ್ಲಿ ಅಗಾಡಿ 8876 ಮತಗಳನ್ನು ಗಳಿಸಿದೆ.












