ಅಯೋಧ್ಯೆ ತೀರ್ಪಿಗೆ ಸಜ್ಜಾದ ಸರಕಾರ-ಸಂಘಪರಿವಾರ: ವರದಿ

0
822

ಹೊಸದಿಲ್ಲಿ,ಅ.28: ನವೆಂಬರ್ 16ರ ಮೊದಲು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯ ಪೀಠ ಬಾಬರಿ ಜಮೀನು ಪ್ರಕರಣದಲ್ಲಿ ತೀರ್ಪು ನೀಡಲಿದ್ದು ಮೋದಿ ಸರಕಾರ ಮತ್ತು ಸಂಘಪರಿವಾರ ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

ಅಯೋಧ್ಯೆ ತೀರ್ಪಿನ ಮೊದಲಿನ ಕೊನೆಯ ಮನ್‍ ಕಿ ಬಾತ್‍ನಲ್ಲಿ ರಾಮ ಮಂದಿರ ಪರ ಅಲಾಹಾಬಾದಿನ ಹೈಕೋರ್ಟು ತೀರ್ಪನ್ನು ನರೇಂದ್ರ ಮೋದಿ ಜನರಿಗೆ ನೆನಪಿಸುವರು ಮತ್ತು ಅಯೋಧ್ಯೆ ತೀರ್ಪು ಮೊದಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸಹಿತ ಸಂಘಪರಿವಾರ ನಾಯಕರು ಸುಪ್ರೀಂಕೋರ್ಟಿನ ತೀರ್ಪಿನ ಮೊದಲು ದಿಲ್ಲಿಗೆ ತಲುಪುವರು ಎಂದು ವರದಿಗಳು ತಿಳಿಸುತ್ತಿವೆ.

ತಮ್ಮ ಪರ ತೀರ್ಪು ಸುಪ್ರೀಂಕೋರ್ಟಿನಿಂದ ಬರಲಿದೆ ಎಂದು ಸಂಘಪರಿವಾರ ನಿರೀಕ್ಷಿಸುತ್ತಿದೆ. ಆರೆಸ್ಸೆಸ್ ತೀರ್ಪಿನ ನಂತರದ ಮುಂದಿನ ಕ್ರಮ ಏನು ಎನೆನ್ನುವುದನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಆರಸ್ಸೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಕೋರ್ಟಿನಿಂದ ತಮ್ಮ ಪರವೇ ತೀರ್ಪು ಬರಲಿದೆ ಎಂದು ವಿಶ್ವಾಸ ಹೊಂದಿದ್ದೇವೆ. ರಾಮಮಂದಿರ ಯಾವುದೇ ರಾಜಕೀಯ ವಿಷಯವಲ್ಲ. ಅದು ಹಿಂದೂಗಳಿಗೆ ಸಂಬಂಧಿಸಿದ ವಿಷಯ ಮಾತ್ರವಾಗಿದೆ ಎಂದು ಅವರು ಹೇಳಿದರು.

ಡಿಸೆಂಬರ್ 6ರ ಮೊದಲು ರಾಮಮಂದಿರ ಕಟ್ಟಲು ತೊಡಗುತ್ತೇವೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಈಗಾಗಲೇ ಘೋಷಿಸಿದ್ದಾರೆ.ಆದರೆ ಅವರಂತೆ ಊಹಿಸಿ ತೀರ್ಪಿನ ಕುರಿತು ನಾವು ಹೇಳಲಾರೆವು ಎಂದು ಆರೆಸ್ಸೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಸಂಘರ್ಷಕ್ಕೆ ಕಾರಣವಾಗುವಂತಹ ಹೇಳಿಕೆಗಳನ್ನು ಕೊಡಬಾರದೆಂದು ಕೇಡರ್‍ಗಳಿಗೆ ಸೂಚಿಸಲಾಗಿದೆ. ರಾಮಮಂದಿರಕ್ಕೆ ಎರಡು ಪಾಲು ಮತ್ತು ಒಂದು ಪಾಲು ಸುನ್ನಿ ವಕ್ಫ್ ಬೋರ್ಡಿಗೆ ನೀಡುವ ಅಲಾಹಾಬಾದಿನ ಹೈಕೋರ್ಟು ತೀರ್ಪು ಇದ್ದು ಇದನ್ನು ಪ್ರಶ್ನಿಸಿ ಎಲ್ಲ ಜಮೀನು ತಮ್ಮ ಹಕ್ಕು ಎಂದು ಸುನ್ನಿವಕ್ಫ್ ಬೋರ್ಡು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.

ಆದರೆ, ಅಲಾಹಾಬಾದ್‍ನ ಹೈಕೋರ್ಟು ತೀರ್ಪನ್ನು ಪ್ರಧಾನಿ ಮೋದಿ ಮನ್‍ಕಿ ಬಾತ್‍ನಲ್ಲಿ ಬೆಂಬಲಿಸಿದ್ದರು. ಇದು ಎಲ್ಲರೂ ಒಪ್ಪಿದ ತೀರ್ಪು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪೌರ ಸಮೂಹ ಮತ್ತು ರಾಜಕೀಯ ಪಕ್ಷಗಳು ತೀರ್ಪಿನಲ್ಲಿ ಪಕ್ವತೆಯ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಹೇಳಿದ್ದರು.

ಇದೇ ವೇಳೆ ಸುಪ್ರೀಂಕೋರ್ಟಿನ ತೀರ್ಪಿನ ಮೊದಲು ರಾಮಮಂದಿರ ಬೆಂಬಲಿಸಿ ಕಾಂಗ್ರೆಸ್ ನಾಯಕರು ಕೂಡ ರಂಗಪ್ರವೇಶಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ಎದ್ದು ನಿಲ್ಲಬೇಕೆಂದು ನಾವು ಬಯಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಹರೀಶ್ ರಾವತ್ ಮತ್ತು ಜಿತಿನ್ ಪ್ರಸಾದ್ ಹೇಳಿದ್ದಾರೆ.