ಸನ್ಮಾರ್ಗ ವಾರ್ತೆ
ಕೊಚ್ಚಿ,ಅ.28: ಪಿಎಸ್ ಶ್ರೀಧರನ್ ಪಿಳ್ಳೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಇಂದು ರಾಜೀನಾಮೆ ನೀಡಲಿದ್ದಾರೆ. ಮಿಝೋರಾಂ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಅವರು ಕೇರಳದ ಪ್ರಮುಖ ಬಿಜೆಪಿ ನಾಯಕ ಆಗಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಕೊಚ್ಚಿಯ ಸಂಘಪರಿವಾರ ಕಾರ್ಯಾಲಯದಲ್ಲಿ ನಾಯಕರನ್ನು ಭೇಟಿಯಾಗಿದ್ದಾರೆ.
ರಾಷ್ಟ್ರಪತಿಯ ಸೂಚನೆ ಮೇರೆಗೆ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಾಮಾನ್ಯವಾಗಿ ಯಾರೂ ತಮ್ಮ ಪಾರ್ಟಿಗೆ ರಾಜೀನಾಮೆ ನೀಡುವುದಿಲ್ಲ. ಅಗತ್ಯ ಕ್ರಮಗಳನ್ನು ಸೂಕ್ತವಾಗಿ ಪಾಲಿಸುವ ನಿಟ್ಟಿನಿಂದ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ.ಸಕ್ರಿಯ ರಾಜಕೀಯದಲ್ಲಿ ಪೂರ್ಣ ಮನಸ್ಸಿಟ್ಟು ಕೆಲಸ ಮಾಡಿದಂತೆ ರಾಜ್ಯಪಾಲರ ಹುದ್ದೆಯಲ್ಲಿಯೂ ಸೇವೆ ಸಲ್ಲಿಸುವೆ. ಇನ್ನು ಮುಂದೆ ರಾಜಕೀಯ ಹೇಳಿಕೆ ನೀಡುವುದಿಲ್ಲ ಎಂದು ಅವರು ಹೇಳಿದರು. ನವೆಂಬರ್ ಐದು, ಅಥವಾ ಆರರಂದು ಅವರು ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.












