ಸನ್ಮಾರ್ಗ ವಾರ್ತೆ
ಮುಂಬೈ,ನ.12: ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಶಿವಸೇನೆಗೆ ಬೆಂಬಲಿಸಿ ಪತ್ರ ನೀಡದ ಕಾಂಗ್ರೆಸ್ನೊಂದಿಗೆ ಎನ್ಸಿಪಿ ಬೇಸರದಲ್ಲಿದೆ. ರಾಜ್ಯಪಾಲರು ನಿಶ್ಚಯಿಸಿದ ಸಮಯಾವಧಿ ಕೊನೆಗೊಳುತ್ತಿದ್ದು ಶಿವಸೇನೆಯ ತದ್ವಿರುದ್ಧ ಸಿದ್ಧಾಂತದಿಂದಾಗಿ ಕಾಂಗ್ರೆಸ್ನಲ್ಲಿ ಶಿವಸೇನೆಗೆ ಬೆಂಬಲ ನೀಡುವ ವಿಷಯದಲ್ಲಿ ಹಿಂಜರಿತವಿದೆ ಎನ್ನಲಾಗಿದೆ. ಈ ವಿಷಯದಲ್ಲಿ ಹೆಚ್ಚಿನ ಚರ್ಚೆಗೆ ಮುಂಬೈಗೆ ಬರಬೇಕಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಗಳಿಗೆ ಬರುವ ಅಗತ್ಯವಿಲ್ಲ ಎಂದು ಶರದ್ ಪವಾರ್ ತಿಳಿಸಿದ್ದಾರೆ.
ಮುಂಬೈಯಲ್ಲಿ ಎನ್ಸಿಪಿ ಶಾಸಕರ ಸಭೆ ನಡೆಯುತ್ತಿದೆ. ಒಂದು ಗಂಟೆಗೆ ಪಾರ್ಟಿಯ ಉನ್ನತ ನಾಯಕರ ಸಭೆ ನಡೆಯಲಿದೆ. ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಎನ್ಸಿಪಿ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದ್ದರೂ ಈ ಕುರಿತು ತನಗೇನೂ ಗೊತ್ತಿಲ್ಲ ಎಂದು ಶರದ್ ಪವಾರ್ ಹೇಳಿದರು. ಮಂಗಳವಾರ ಸಂಜೆ ಏಳೂವರೆ ಗಂಟೆಯೊಳಗೆ ರಾಜ್ಯಪಾಲರು ಸಮಯ ನೀಡಿದ್ದಾರೆ. ಎನ್ಸಿಪಿಗೆ 54 ಮತ್ತು ಕಾಂಗ್ರೆಸ್ಗೆ 44 ಸದಸ್ಯರಿದ್ದಾರೆ. ಕಾಂಗ್ರೆಸ್ ಬೆಂಬಲಿಸಿದರೆ ಶಿವಸೇನೆ, ಎನ್ಸಿಪಿ ಕಾಂಗ್ರೆಸ್ ಸರಕಾರದ ಸಾಧ್ಯತೆ ಇನ್ನೂ ಮುಕ್ತವಾಗಿದೆ.












