ಸನ್ಮಾರ್ಗ ವಾರ್ತೆ
ಕೇರಳ,ನ.12: ಬಾಬರಿ ಮಸೀದಿ ಪ್ರಕರಣದಲ್ಲಿ ಕೋರ್ಟು ತೀರ್ಪಿನ ಹಿನ್ನೆಲೆಯಲ್ಲಿ ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯಕಾರಿಣಿ, ಪೋಷಕ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆದಿದ್ದು, ಇದರಲ್ಲಿ ಸಮುದಾಯದ ಭಾವನೆಯ ಲಾಭವೆತ್ತಲು ಅಸದುದ್ದೀನ್ ಉವೈಸಿ ಮತ್ತು ಸಿಪಿಎಂ ಯತ್ನಿಸುತ್ತಿದೆ ಎಂದು ಕಟುವಾಗಿ ಟೀಕಿಸಲಾಗಿದೆ. ತೀರ್ಪಿನ ಅಧ್ಯಯನ ಮಾಡಿದ ಬಳಿಕ ಅಭಿಪ್ರಾಯ ಪ್ರಕಟಿಸುವುದು ಉತ್ತಮ ಎಂದು ಸಭೆಯಲ್ಲಿ ನಿರ್ಧಾರವಾಗಿದೆ.
ಸಾಮಾಜಿಕ ಮಾಧ್ಯಮಗಳ ಸಹಿತ ಅವರ ನಾಯಕರು ಲಾಭವೆತ್ತುವುದಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಗಳಿಸುವುದಕ್ಕೆ ಕಾನೂನು ಹೋರಾಟದಲ್ಲಿ ಸಿಪಿಎಂ ಸಹಕರಿಸುವುದಿಲ್ಲ. ಭಾವನಾತ್ಮಕ ಅಭಿಪ್ರಾಯ ಪ್ರಕಟಿಸಿ ಮತಗಳಿಸುವುದು ಮಾತ್ರ ಅವರ ಉದ್ದೇಶವಾಗಿದೆ. ಉತ್ತರ ಭಾರತದಲ್ಲಿ ಅಸದುದ್ದೀನ್ ಉವೈಸಿಯು ಹೀಗೆ ಮಾಡುತ್ತಿದ್ದಾರೆ ಎಂದು ಮುಸ್ಲಿಂ ಲೀಗ್ ಹೇಳಿದೆ.












