ಎನ್‌ಸಿಪಿಯೊಂದಿಗಿನ ಸಖ್ಯ; ಕಾಂಗ್ರೆಸ್ ಸಾಮೂಹಿಕ ತೀರ್ಮಾನ ತೆಗೆದುಕೊಳ್ಳಲಿದೆ- ಖರ್ಗೆ

0
576

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.12: ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವ ಬಗ್ಗೆ ಎನ್‍ಸಿಪಿಯೊಂದಿಗೆ ನಿಲ್ಲಬಹುದೇ ಎಂಬುದರಲ್ಲಿ ಕಾಂಗ್ರೆಸ್ ಸಾಮೂಹಿಕ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಚುನಾವಣೆಯ ಮೊದಲು ಎನ್‍ಸಿಪಿಯೊಂದಿಗೆ ಕಾಂಗ್ರೆಸ್ ಸಖ್ಯ ಮಾಡಿಕೊಂಡಿತ್ತು.ಆದರೆ ಸರಕಾರ ರಚಿಸುವ ಕುರಿತು ಹೆಚ್ಚಿನ ಚರ್ಚೆಗಳನ್ನು ಮಾಡಬೇಕಾಗಿದೆ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶರದ್ ಪವಾರ್‍ರೊಂದಿಗೆ ಚರ್ಚಿಸಲಿದ್ದಾರೆ ಕಾಂಗ್ರೆಸ್ ಅಂತಿಮ ತೀರ್ಮಾನ ಕೂಡಲೇ ತಿಳಿಸಲಿದೆ ಎಂದು ಖರ್ಗೆ ಹೇಳಿದರು. ಮುಂಬೈಯಲ್ಲಿ ಎನ್‍ಸಿಪಿ ಶಾಸಕರ ಸಭೆ ನಡೆಯುತ್ತಿದೆ. ಮಧ್ಯಾಹ್ನ ಪಾರ್ಟಿಯ ಉನ್ನತ ಮಟ್ಟದ ನಾಯಕರ ಸಭೆಯೂ ನಡೆಯಲಿದೆ. ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಗಳು ಮುಂಬೈಗೆ ಬಂದು ಶರದ್ ಪವಾರ್‍‌ರೊಂದಿಗೆ ಚರ್ಚಿಸಲಿದ್ದಾರೆ ಎಂದೂ ವರದಿಯಾಗಿದೆ.