ಟರ್ಕಿ-ಕತಾರ್ ಅಧ್ಯಕ್ಷರ ಸಮಾಲೋಚನೆ

0
384

ಸನ್ಮಾರ್ಗ ವಾರ್ತೆ

ದೋಹ,ನ.26: ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಕುರಿತು ಚರ್ಚೆಗೆ ಮತ್ತು ದ್ವಿಪಕ್ಷೀಯ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಕತಾರ್‌ಗೆ ಭೇಟಿ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಕತಾರ್‌ಗೆ ಬಂದ ಅವರು ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್‍ ಥಾನಿಯವರೊಡನೆ ಚರ್ಚಿಸಿದರು. ಎರಡು ದೇಶಗಳ ಪರಸ್ಪರ ಸಂಬಂಧ ಸಹಕಾರಕ್ಕೆ ಇನ್ನಷ್ಟು ಬಲ ನೀಡುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ, ಪ್ರಾದೇಶಿಕ, ಅಂತಾರಾಷ್ಟ್ರೀಯ ವಿಷಯಗಳಲ್ಲಿ ಚರ್ಚೆ ನಡೆದಿದ್ದು ಇಬ್ಬರು ಪರಸ್ಪರ ಎರಡು ದೇಶಗಳ ಸೌಹಾರ್ದ ಬಲಪಡಿಸುವುದು ಉದ್ದೇಶವಾಗಿದೆ ಎಂದು ಟರ್ಕಿ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿದೆ.