ಮಹಾರಾಷ್ಟ್ರ: ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ

0
766

ಸನ್ಮಾರ್ಗ‌ ವಾರ್ತೆ

ಮುಂಬೈ,ನ.26: ನಾಳೆ ವಿಶ್ವಾಸ ಮತ ಯಾಚನೆ ನಡೆಸಬೇಕೆಂದು ಸುಪ್ರೀಂ ಕೋರ್ಟು ಆದೇಶ ಜಾರಿಯಾಗುವುದನ್ನು ಕಾಯದೇ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ರಿಗೆ ಹಸ್ತಾಂತರಿಸಿದರು. ದೇವೇಂದ್ರ ಫಡ್ನವಿಸ್ ಕೂಡ ರಾಜೀನಾಮೆ ನೀಡುವರೆಂದು ಸೂಚನೆಯಿದೆ. ಫಡ್ನವಿಸ್ ಸಂಜೆ ಮೂರುವರೆ ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಎನ್‍ಸಿಪಿ ,ಶಿವಸೇನೆ, ಕಾಂಗ್ರೆಸ್ ಸಖ್ಯದ ನಾಯಕನನ್ನು ಆಯ್ಕೆ ಮಾಡುವುದಕ್ಕಾಗಿ ಶಾಸಕರು ಇಂದು ಸಂಜೆ ಐದು ಗಂಟೆಗೆ ಜಂಟಿ ಸಭೆ ಸೇರಲಿದ್ದಾರೆ. ಈಗ ಮುಂಬೈಯ ಜೆಡಬ್ಲ್ಯೂ ಮಾರಿಯಟ್ಟ ಹೊಟೇಲಿನಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆಯುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಬಾಲಸಾಹೇಬ್ ಥೋರತ್, ಅಶೋಕ್ ಚೌಹಾನ್ ಸಭೆಯಲ್ಲಿ ಭಾಗವಹಿಸಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಲಸಾಹೇಬ್ ಥೋರಾತ್‍ರನ್ನು ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕನಾಗಿ ಕಾಂಗ್ರೆಸ್ ಆಯ್ಕೆ ಮಾಡಿದೆ. ಅವರು ಹಿರಿಯ ಶಾಸಕ ಜೊತೆಗೆ ಸೋನಿಯಾ ಗಾಂಧಿ ನಿಕಟವರ್ತಿಯಾಗಿದ್ದಾರೆ. ರಾಹುಲ್‍ ಗಾಂಧಿಗೂ ನಿಕಟರಾಗಿದ್ದಾರೆ. ಎನ್‍ಸಿಪಿ, ಶಿವಸೇನೆ, ಕಾಂಗ್ರೆಸ್ ಸಖ್ಯ ತಮ್ಮ 162 ಶಾಸಕರನ್ನು ನಿನ್ನೆ ರಾತ್ರೆ ಹೊಟೆಲ್ ಹಯಾತ್‍ನಲ್ಲಿ ಸೇರಿಸಿತ್ತು. ಸಮಾನವಾಗಿ ಎಲ್ಲ ಬಿಜೆಪಿ ಶಾಸಕರು ಇಂದು ರಾತ್ರೆ ಒಂಬತ್ತು ಗಂಟೆಗೆ ವಾಂಕೆಡೆ ಸ್ಟೇಡಿಯಂಗೆ ತಲುಪಿಸಲಾಗುವುದು. ಎನ್‍ಸಿಪಿ ನಾಯಕ ಶರದ್ ಪವಾರ್ ಪುತ್ರಿ ಸುಪ್ರಿಯಾ, ಶಿವಸೇನೆ ನಾಯಕ ಸಂಜಯ್ ರಾವುತ್ ಮುಂಬೈ ಹೊಟೇಲ್ ಸೋಫಿಟೆಲಿನಲ್ಲಿ ಚರ್ಚಿಸುತ್ತಿದ್ದಾರೆ. ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಪಾರ್ಟಿ ಶಾಸಕರನ್ನು ಭೇಟಿಯಾಗಲು ಲೆಮನ್ ಟ್ರೀಗೆ ಬಂದಿದ್ದಾರೆ. ನಾಲ್ಕು ಪಾರ್ಟಿಯೊಳಗೆ ಬಿರುಸಿನ ರಾಜಕೀಯ ಚರ್ಚೆ ನಡೆಯುತ್ತಿದೆ.