ಟರ್ಕಿ: ಉರ್ದುಗಾನ್ ಮಿತ್ರನಿಂದ ಹೊಸ ಪಾರ್ಟಿ

0
632

ಸನ್ಮಾರ್ಗ ವಾರ್ತೆ-

ಅಂಕಾರ, ನ. 28: ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್‍ರಿಂದ ಬೇರ್ಪಟ್ಟಿರುವ ಮಿತ್ರ ಅಲಿ ಬಾಬಬಕನ್ ಹೊಸ ಪಾರ್ಟಿ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಅವರು ಈ ಹಿಂದೆ ಅಕ್ ಪಾರ್ಟಿಯ ಮೈತ್ರಿಯಲ್ಲಿದ್ದರು. ಆಕ್ ಪಾರ್ಟಿಯನ್ನು ಉರ್ದುಗಾನ್ ಸ್ಥಾಪಿಸಿದ್ದಾರೆ. ಈಗ ಅಲಿ ಹೊಸ ಪಾರ್ಟಿಯೊಂದಿಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿಡಲು ನಿರ್ಧರಿಸಿದ್ದು ಈ ಹಿಂದೆ ಉರ್ದುಗಾನ್ ಸರಕಾರದಲ್ಲಿ ಉಪಪ್ರಧಾನಿಯಾಗಿದ್ದರು.

ಅಲಿ ಬಾಬಕನ್ ಚುನಾವಣೆ ರಂಗದಲ್ಲಿ ತನ್ನ ಮುಖ್ಯ ಎದುರಾಳಿ ಎ ಕೆ ಪಾರ್ಟಿ ಜಸ್ಟಿಸ್ ಡೆವಲಪ್‍ಮೆಂಟ್ ಪಾರ್ಟಿ ಆಗಿದೆ. ತಾನು ಉರ್ದುಗಾನ್‍ರಿಂದ ದೂರವಾಗಲು ನಮ್ಮ ನಡುವಿನ ವ್ಯತ್ಯಾಸಗಳು ಕಾರಣವಾಗಿದೆ. ಆದ್ದರಿಂದ ತಾನು ಎ ಕೆ ಪಾರ್ಟಿ ತೊರೆದೆ ಎಂದು ಒಂದು ಟಿವಿ ಸಂದರ್ಶನದಲ್ಲಿ ಅಲಿ ಬಾಬಕನ್ ತಿಳಿಸಿದ್ದಾರೆ.