ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ನ. 28: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾರನ್ನು ಕಟುವಾಗಿ ಟೀಕಿಸಿದ್ದಾರೆ. ದೇಶದಲ್ಲಿ ಲಾಭದಲ್ಲಿರುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ನರೇಂದ್ರ ಮೋದಿ ತಮ್ಮ ಗೆಳೆಯರಿಗೆ ಮಾರುತ್ತಿದ್ದಾರೆ. ಪ್ರಜೆಗಳ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ವಾಟ್ಸಪ್ ಮೂಲಕ ಖಾಸಗಿತನವನ್ನು ಸೋರಿಕೆ ಮಾಡುತ್ತಿದ್ದಾರೆ ಎಂದು ಸೋನಿಯಾ ಗಾಂಧಿ ಹೇಳಿದರು.
ಕಾಶ್ಮೀರದಲ್ಲಿ ಕೇಂದ್ರ ಸರಕಾರ ಹಾಕಿರುವ ನಿಯಂತ್ರಣಗಳನ್ನು ಸೋನಿಯಾ ಗಾಂಧಿ ಟೀಕಿಸಿದರು. ಭಾರತದ ರಾಜಕೀಯ ನಾಯಕರಿಗೆ ಅಲ್ಲಿಗೆ ಹೋಗಲು ಬಿಡುವುದಿಲ್ಲ. ಆದರೆ ಯುರೋಪಿನ ಸಂಸದರಿಗೆ ಹೋಗಲು ಬಿಡಲಾಯಿತು. ಮೋದಿ, ಅಮಿತ್ ಶಾರ ಇಂತಹ ಕ್ರಮ ಲಜ್ಜೆ ತರಿಸುವಂತಹದೆಂದು ಅವರು ಹೇಳಿದರು.
ಮಹಾರಾಷ್ಟ್ರದಲ್ಲಿ ಅಧಿಕಾರ ಕಿತ್ತುಕೊಳ್ಳಲು ಬಿಜೆಪಿ ನಾಚಿಕೆಗೇಡಿನ ಆಟವಾಡಿತು. ಆದರೆ ಅದನ್ನು ದಕ್ಕಿಸಿಕೊಳ್ಳಲು ಅದರಿಂದಾಗಿಲ್ಲ ಎಂದು ಸೋನಿಯಾ ಟೀಕಿಸಿದರು.












