ಸನ್ಮಾರ್ಗ ವಾರ್ತೆ
ಭೋಪಾಲ,ನ.29: ಮಧ್ಯಪ್ರದೇಶಕ್ಕೆ ಕಾಲಿಟ್ಟರೆ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ರನ್ನು ಜೀವಂತ ಸುಟ್ಟು ಹಾಕುವುದಾಗಿ ಕಾಂಗ್ರೆಸ್ ಬಯೊರ ಶಾಸಕ ಗೋವರ್ಧನ್ ಡಾಂಗಿ ನೀಡಿರುವ ಹೇಳಿಕೆ ವಿವಾದವಾಗಿದೆ. ಗೋಡ್ಸೆಯನ್ನು ದೇಶಭಕ್ತ ಎಂದು ಪ್ರಜ್ಞಾ ಪಾರ್ಲಿಮೆಂಟಿನಲ್ಲಿ ಹೇಳಿದ್ದಕ್ಕೆ ಡಾಂಗಿ ಉಗ್ರ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ, ಪ್ರಜ್ಞಾರನ್ನು ಆವರ ಹೇಳಿಕೆಗಾಗಿ ಪಾರ್ಲಿಮೆಂಟ್ ರಕ್ಷಣಾ ಸಲಹಾ ಸಮಿತಿಯಿಂದ ತೆಗೆದು ಹಾಕಲಾಗಿತ್ತು.ಆದರೆ, ಪ್ರಜ್ಞಾರ ಹೇಳಿಕೆಯನ್ನು ಸ್ಪೀಕರ್ ಕಡತಕ್ಕೆ ಸೇರಿಸಿಲ್ಲ.












