ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಡಿ.5:ಕಳೆದ ವರ್ಷ ಹೊರಡಿಸಿದ ಶಬರಿಮಲೆ ಯುವತಿಯರ ಪ್ರವೇಶ ತೀರ್ಪು ಅಂತಿಮವಲ್ಲ ಎಂದು ಸುಪ್ರೀಂ ಕೋರ್ಟು ಚೀಫ್ ಜಸ್ಟಿಸ್ ಎಸ್ಐ ಬೊಬ್ಡೆ ಹೇಳಿದರು. 2018ರ ತೀರ್ಪನ್ನು ಮರುಪರಿಶೀಲನಾ ಅರ್ಜಿಯನ್ನು ವಿಶಾಲ ಪೀಠಕ್ಕೆ ಒಪ್ಪಿಸಿದ ಕುರಿತು ಚೀಫ್ ಜಸ್ಟಿಸ್ ಹೀಗೆ ಹೇಳಿದ್ದಾರೆ.
ಶಬರಿಮಲೆ ಪ್ರವೇಶಕ್ಕೆ ಸಂಬಂಧಿಸಿ ಬಿಂದು ಅಮ್ಮಿನಿ ಅರ್ಜಿಯನ್ನು ಪರಿಗಣಿಸುವ ವೇಳೆ ಚೀಫ್ ಜಸ್ಟಿಸ್ ಹೀಗೆ ಹೇಳಿದ್ದು ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ.
“ಇಲ್ಲಿ ಒಂದು ವಿಶಾಲ ಪೀಠ ಇದೆ. 2018ರ ತೀರ್ಪು ಈ ವಿಷಯದಲ್ಲಿ ಕೊನೆಯದಲ್ಲ ಎಂದು ಚೀಫ್ ಜಸ್ಟಿಸ್ ಎಸ್ಐ ಬೊಬ್ಡೆ ಹೇಳಿದರು. ಕೊಚ್ಚಿಯಲ್ಲಿ ಕಮಿಶನರ್ ಕಚೇರಿ ಸಮೀಪ ಬಿಂದು ಅಮ್ಮಿನಿಗೆ ಮೇಲೆ ಮೆಣಸಿನ ಸ್ಪ್ರೇ ಹಾರಿಸಲಾಗಿತ್ತು. ಅವರ ಅರ್ಜಿಯಲ್ಲಿ ಇಂದಿರಾ ಜೈಸಿಂಗ್ ಹಾಜರಾಗಿದ್ದಾರೆ.
ಕಮಿಶನರ್ ಕಚೇರಿಯ ಹೊರಗೆ ಕೆಲವರು ಬಿಂದು ಮುಖಕ್ಕೆ ರಾಸಾಯನಿಕ ಎರಚಿದ್ದಾರೆ ಎಂದು ಇಂದಿರಾ ಜೈಸಿಂಗ್ ಹೇಳಿದರು. ಎಲ್ಲ ಪ್ರಾಯದ ಮಹಿಳೆಯರು ಶಬರಿಮಲೆಗೆ ಹೋಗಲು ಸ್ಪಷ್ಟ ತೀರ್ಪು ಇದ್ದೂ ಕೇರಳ ಸರಕಾರ ಯುವತಿಯರಿಗೆ ಪ್ರವೇಶ ನೀಡಲು ನಿರಾಕರಿಸುತ್ತಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಸೆಪ್ಟಂಬರ್ನಲ್ಲಿ ಐದು ಸದಸ್ಯರ ಸಂವಿಧಾನ ಪೀಠದ ನಾಲ್ವರು ಸದಸ್ಯರು ನೀಡಿದ ಬೆಂಬಲದಲ್ಲಿ ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎನ್ನುವ ತೀರ್ಪು ನೀಡಲಾಗಿತ್ತು. ಇದರ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ.












