ಧರ್ಮದ ಆಧಾರದಲ್ಲಿ ಪೌರತ್ವ ನಿಶ್ಚಯಿಸಬೇಡಿರಿ- ಯೆಚೂರಿ

0
576

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.5: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಧರ್ಮದ ಆಧಾರದಲ್ಲಿ ಪೌರತ್ವ ತೀರ್ಮಾನಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರಕಾರದ ಸಚಿವ ಸಂಪುಟ ಪಾಸು ಮಾಡಿದ ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಪ್ರತಿಕ್ರಿಯಿಸಿದ ಅವರು ಪೌರತ್ವ ಪಟ್ಟಿ ಅಸ್ಸಾಂಗೆ ಮಾತ್ರ ಇರುವುದು. ಆದರೆ ಅದನ್ನು ಇಡೀ ದೇಶಕ್ಕೆ ತರುವ ಬಿಜೆಪಿ ಯತ್ನ ಕೋಮು ಧ್ರುವೀಕರಣದ ಉದ್ದೇಶವನ್ನು ಹೊಂದಿದೆ. ಬಿಜೆಪಿಯ ಇಂತಹ ಯತ್ನಗಳನ್ನು ತಡೆಯಬೇಕಾಗಿದೆ ಎಂದು ಅವರು ಹೇಳಿದರು. ಬುಧವಾರ ಕಮ್ಯುನಿಸ್ಟ್ ಪಾರ್ಟಿಯ ನೂರು ವರ್ಷಗಳು ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತಾಡುತ್ತಿದ್ದರು. ಭೀಮ ಕೊರೆಗಾಂವ್ ಪ್ರಕರಣ ಹಿಂಪಡೆಯುವ ಮಹಾರಾಷ್ಟ್ರ ಸರಕಾರದ ತೀರ್ಮಾನ ಸ್ವಾಗತಾರ್ಹವಾಗಿದೆ. ಜಸ್ಟಿಸ್ ಲೋಹಿಯಾರವರ ಸಾವು ಮರು ತನಿಖೆಯಾಗಬೇಕೆಂದು ಯೆಚೂರಿ ಆಗ್ರಹಿಸಿದರು. ಪೊಲಿಟ್ ಬ್ಯೂರೊ ಸದಸ್ಯೆ ವೃಂದಾ ಕಾರಟ್ ಸಭೆಯಲ್ಲಿ ಭಾಗವಹಿಸಿದ್ದರು.