ನಿತಾಕತ್‍ನ ಹಳದಿ ಕ್ಯಾಟಗರಿ ರದ್ದತಿಗೆ ಆದೇಶ

0
807

ಸನ್ಮಾರ್ಗ ವಾರ್ತೆ

ಜಿದ್ದ,ಡಿ.5: ನಿತಾಕತ್‍ನ ಹಳದಿ ಕೆಟಗರಿ ರದ್ದು ಪಡಿಸಲು ಸೌದಿ ಕಾರ್ಮಿಕ ಸಾಮಾಜಿಕ ಅಬೀವೃದ್ಧಿ ಸಚಿವ ಇಂಜಿನಿಯರ್ ಅಹ್ಮದ್ ಬಿನ್ ಸುಲೈಮಾನ್ ಅಲ್‍ರಾಜೀ ಆದೇಶ ಹೊರಡಿಸಿದ್ದಾರೆ. ಸ್ವದೇಶಿಗಳಿಗೆ ಹೆಚ್ಚು ಉದ್ಯೋಗವಕಾಶ ಒದಗಿಸುವುದು ಉದ್ದೇಶವೆಂದು ಪ್ರಾದೇಶಿಕ ಪತ್ರಿಕೆಗಳು ವರದಿ ಮಾಡಿವೆ. ಜನೆವರಿ 26ರಿಂದ ತೀರ್ಮಾನ ಜಾರಿಗೊಳ್ಳಲಿದೆ. ಹಳದಿ ಕೆಟಗರಿಯ ಎಲ್ಲ ರಾಜ್ಯಗಳು ರೆಡ್ ಕೆಟಗರಿಗೆ ಮಾರ್ಪಡಿಸಲು ತೀರ್ಮಾನಿಸಲಾಗಿದೆ. ಸ್ವದೇಶಿಗಳಿಗೆ ಹೆಚ್ಚು ಉದ್ಯೋಗವಕಾಶಗಳನ್ನು ಕೊಡುವ ಸಂಸ್ಥೆಗಳನ್ನು ಹಸಿರು ಕೆಟಗರಿಕೆ ಬದಲಿಸಲು ಪ್ರೋತ್ಸಾಹಿಸಲಾಗುವುದು. ಸಂಸ್ಥೆಗಳಿಗೆ ಸಚಿವಾಲಯ ಹೆಚ್ಚು ಸೇವೆಯನ್ನು ನೀಡಲಿದೆ. ಸ್ವದೇಶೀಕರಣದ ಅನುಪಾತವನ್ನು ಪೂರ್ತಿ ಮಾಡದ ಸಂಸ್ಥೆಗಳಿಗೆ ನಿಶ್ಚಯಿಸಿದ ಕೆಟಗರಿ ಹಳದಿ ಮತ್ತು ಕೆಂಪು ಆಗಿದೆ.