ಚೀನದ ಉಯಿಗುರ್ ಮುಸ್ಲಿಮರಿಗಾಗಿ ಅಮೆರಿಕದಿಂದ ಕಾನೂನು ಜಾರಿ

0
1004

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಡಿ.5: ಉಯಿಗುರ್ ಮುಸ್ಲಿಮರ ವಿರುದ್ಧ ಚೀನದ ಮಾನವಹಕ್ಕು ಉಲ್ಲಂಘನೆಯನ್ನು ಖಂಡಿಸಿ ಅಮೆರಿಕ ಪ್ರತಿನಿಧಿ ಸಭೆ ಉಯಿಗುರ್ ಮಾನವಹಕ್ಕು ಕಾನೂನು ಪಾಸು ಮಾಡಿದೆ. ಚೀನದ ಹತ್ತು ಲಕ್ಷಕ್ಕೂ ಹೆಚ್ಚು ಉಯಿಗುರ್ ಮತ್ತಿತರ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಸಾಮೂಹಿಕ ಬಂದಿಖಾನೆಯಲ್ಲಿರಿಸಿದ್ದರ ವಿರುದ್ಧ ಅಮೆರಿಕ ಸರಕಾರ ಕ್ರಮ ಜರಗಿಸಬೇಕು ಎಂದು ಮಸೂದೆ ಹೇಳುತ್ತಿದೆ. ಅಮೆರಿಕ ಜನಪ್ರತಿನಿಧಿ ಸಭೆಯ ಕ್ರಮ ಚೀನ-ಅಮೆರಿಕ ಸಂಬಂಧದಲ್ಲಿ ಇನ್ನಷ್ಟು ಬಿರುಕು ಮೂಡಿಸಲಿದೆ.

ಈ ಮಸೂದೆಯನ್ನು ಸೆನೆಟ್ ಈ ಹಿಂದೆಯೇ ಪಾಸು ಮಾಡಿತ್ತು. ಡೆಮಕ್ರಾಟ್‍ಗಳು ಬಹುಮತ ಹೊಂದಿರುವ ಸೆನೆಟ್‍ನಲ್ಲಿ ಒಂದರ ವಿರುದ್ಧ 471 ಮತಗಳಲ್ಲಿ ಮಸೂದೆ ಪಾಸಾಗಿತ್ತು. ಮಸೂದೆ ಪಾಸು ಮಾಡುವ ಮೂಲಕ ದಮನಕ್ಕೊಳಗಾದವರ ನೋವನ್ನು ಅಮೆರಿಕ ಕಣ್ಣುಮುಚ್ಚಿ ಕುಳಿತುಕೊಳ್ಳುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ರಿಪಬ್ಲಿಕನ್ ನಾಯಕ ಕೆವಿನ್ ಮಕಾರ್ತಿ ಹೇಳಿದರು. ಉಯಿಗುರ್ ವಂಶಜರ ವಿರುದ್ಧ ನಡೆಯುವ ಮಾನವ ಹಕ್ಕು ಉಲ್ಲಂಘನೆಯನ್ನು ಪ್ರತಿರೋಧಿಸುವ ಪ್ರಧಾನ ಕ್ರಮ ಇದು ಎಂದು ಮಸೂದೆಯನ್ನು ಸೆನೆಟ್‍ನ ವಿದೇಶ ಸಮಿತಿಯ ಹಿರಿಯ ಸದಸ್ಯರಾದ ಮಾರ್ಕೋ ರೂಬಿ ಮತ್ತು ಬಾಬ್ ಮೆನಂಡೊ ಹೇಳಿದ್ದಾರೆ.

ಸ್ವಯಂ ಆಡಳಿತದ ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿ ಉಯಿಗುರ್‌ಗಳು ಮತ್ತು ಇತರ ಮುಸ್ಲಿಂ ವಂಶಸ್ಥರನ್ನು ಬಂದಿಖಾನೆಯಲ್ಲಿರಿಸಲಾಗಿದೆ. ಅಮೆರಿಕದ ಪ್ರಜೆಗಳ ಸಹಿತ ಅಮೆರಿಕದ ನೆಲದ ಕಾನೂನಿನಂತೆ ವಾಸಿಸಿದ ಜನರ ವಿರುದ್ಧ ಹಸ್ತಕ್ಷೇಪ, ಬೆದರಿಕೆ ಹಾಕುವುದನ್ನು ಮಸೂದೆಯ ಮೂಲಕ ಖಂಡಿಸಲಾಗಿದೆ.