ಸನ್ಮಾರ್ಗ ವಾರ್ತೆ-
ಮೀರತ್, ಡಿ. 9: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಲೈಂಗಿಕ ಕಿರುಕುಳ ನೀಡಿದವರು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಹೇಳಿಕೆ ನೀಡಿದ್ದಾರೆ. ಭಾರತ ಜಗತ್ತಿನ ಅತ್ಯಾಚಾರಿಗಳ ಕೇಂದ್ರ ಎಂದು ರಾಹುಲ್ ಗಾಂಧಿ ಹೇಳಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ದೇಶ ರಾಮ, ಕೃಷ್ಣರ ದೇಶವಾಗಿದೆ. ರಾಹುಲ್ ಏನು ಹೇಳುತ್ತಾರೆ. ನೆಹರೂ ಅತ್ಯಂತ ದೊಡ್ಡ ಲೈಂಗಿಕ ಅತ್ಯಾಚಾರಿ. ಅವರು ರಾಮಕೃಷ್ಣರ ಸಂಸ್ಕಾರವನ್ನು ನಾಶಪಡಿಸಿದರು. ತೀವ್ರವಾದ, ನಕ್ಸಲಿಸಂ, ಭ್ರಷ್ಟಾಚಾರ, ಅತ್ಯಾಚಾರಗಳೆಲ್ಲ ನೆಹರೂ ಕುಟುಂಬದ ಕೊಡುಗೆ ಎಂದು ಸಾಧ್ವಿ ಪ್ರಾಚಿ ಆರೋಪಿಸಿದರು.
ಭಾರತ ಜಗತ್ತಿನ ಅತ್ಯಾಚಾರದ ರಾಜಧಾನಿಯಾಗಿ ತಿಳಿಯಲ್ಪಡುತ್ತಿದೆ. ಭಾರತಕ್ಕೆ ಸ್ವಂತ ಹೆಣ್ಣುಮಕ್ಕಳನ್ನು ಸಹೋದರಿಯರನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಜಗತ್ತು ಆಶ್ಚರ್ಯದಿಂದ ನೋಡುತ್ತಿದೆ ಎಂದು ರಾಹುಲ್ ಗಾಂಧಿ ಶನಿವಾರ ವಯನಾಡಿನಲ್ಲಿ ಹೇಳಿದ್ದರು. ಉತ್ತರಪ್ರದೇಶದ ಒಬ್ಬ ಬಿಜೆಪಿ ಶಾಸಕ ಒಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಿದ್ದರಲ್ಲಿ ಶಾಮೀಲಾಗಿದ್ದರಿಂದ ಪ್ರಧಾನಿ ಒಂದು ಮಾತು ಆಡುವುದಿಲ್ಲವೇ ಎಂದು ರಾಹುಲ್ ಆರೋಪಿಸಿದ್ದರು.












