ತೆಲಂಗಾಣ ಎನ್‍ಕೌಂಟರ್: ಸುಪ್ರೀಂಕೋರ್ಟಿನಿಂದ ಬುಧವಾರ ವಿಚಾರಣೆ

0
640

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 9: ತೆಲಂಗಾಣದಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಗಳ ಮೇಲೆ ನಡೆದಿರುವ ಎನ್‍ಕೌಂಟರ್ ನ ತನಿಖೆ ನಡೆಸಬೇಕು ಮತ್ತು ಹೊಣೆಗಾರರಾದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಲ್ಲಿಸಲಾದ ಅರ್ಜಿಯು ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ತೆಲಂಗಾಣ ಹೈಕೋರ್ಟಿನ ಪರಿಗಣನೆಯಲ್ಲಿರುವ ಅರ್ಜಿ ಯಾವುದು ಎಂಬ ಪರಿಶೀಲನೆಯನ್ನು ನಡೆಸಲಾಗುವುದು ಎಂದು ಸುಪ್ರೀಂಕೋರ್ಟು ತಿಳಿಸಿದೆ. ಕೇಂದ್ರ ಗೃಹ ಸಚಿವಾಲಯ, ತೆಲಂಗಾಣ ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಸೈಬರಾಬಾದ್ ಪೊಲೀಸ್ ಕಮಿಶನರ್ ಸಜ್ಜನ್ ಕುಮಾರ್ ರನ್ನು ಪ್ರತಿ ಕಕ್ಷಿಗಳನ್ನಾಗಿಸಿ ಸುಪ್ರೀಂಕೋರ್ಟು ವಕೀಲ ಮನೋಹರ್ ಲಾಲ್ ಶರ್ಮ, ಜಿಎಸ್‍ ಮಣಿ, ಪ್ರದೀಪ್ ಕುಮಾರ್ ಯಾದವ್ ಅವರು ಅರ್ಜಿ ಸಲ್ಲಿಸಿದ್ದಾರೆ. ನಕಲಿ ಎನ್‍ಕೌಂಟರ್ ನಡೆದಿದೆ ಮತ್ತು ಇದನ್ನು ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸಬೇಕೆಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಡಿಸೆಂಬರ್ ಒಂಬತ್ತರಂದು ರಾತ್ರೆ ಎಂಟು ಗಂಟೆಯವರೆಗೆ ಆರೋಪಿಗಳ ಮೃತದೇಹ ಸುರಕ್ಷಿತವಾಗಿರಿಸಬೇಕೆಂದು ತೆಲಂಗಾಣ ಹೈಕೋರ್ಟು ಕಳೆದ ದಿವಸ ಆದೇಶ ನೀಡಿತ್ತು. ಸರಕಾರಿ ಕೊಲೆ ಕೃತ್ಯ ಎಂಬ ಆಕ್ಷೇಪ ಪ್ರಬಲವಾಗಿದ್ದರಿಂದ ಕೋರ್ಟು ಮಧ್ಯಪ್ರವೇಶಿಸಿತ್ತು.