ಸನ್ಮಾರ್ಗ ವಾರ್ತೆ-
ಗುವಾಹಟಿ, ಡಿ.14: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಅಸ್ಸಾಮ್ನಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಹಿನೆಲೆಯಲ್ಲಿ ಬಿಜೆಪಿ-ಎಜಿಪಿ ಸರಕಾರದಲ್ಲಿ ಭಿನ್ನಮತ ತಲೆದೋರಿದೆ. ಪೌರತ್ವ ಕಾನೂನಿನಲ್ಲಿ ಜನರ ಭಾವನೆಯನ್ನು ಅರ್ಥಮಾಡಿಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ನಾಯಕರ ನಡುವೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಪೌರತ್ವ ಕಾನೂನು ಜಾರಿಗೊಂಡದ್ದರಿಂದ ಹಿರಿಯ ಬಿಜೆಪಿ ನಾಯಕ ಅಸ್ಸಾಂ ಪೆಟ್ರೊಕೆಮಿಕಲ್ಸ್ ಲಿಮೆಟೆಡ್ ಚೇರ್ಮೆನ್ ಜಗದೀಶ್ ಬುಯಾನ್ ರಾಜೀನಾಮೆ ನೀಡಿದ್ದಾರೆ. ಕಾನೂನು ಅಸ್ಸಾಂ ಜನರ ವಿರುದ್ಧವಾಗಿದೆ. ಆದ್ದರಿಂದ ರಾಜೀನಾಮೆ ನೀಡಿದ್ದೇನೆ. ಇನ್ನು ತಾನು ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವೆ ಎಂದು ಹೇಳಿದರು. ಕಾನೂನು ಜಾರಿಗೆ ಬಂದ ನಂತರ ಅಸ್ಸಾಮೀಸ್ ನಟ ಜತಿನ್ ಬೊರ ಅಸ್ಸಾಂ ಸ್ಟೇಟ್ ಫಿಲಂ ಫೈನಾನ್ಸ್ ಡೆವಲಪ್ಮೆಂಟ್ ಕಾರ್ಪೊರೇಶನ್ಗೆ ರಾಜೀನಾಮೆ ನೀಡಿದರು. ಅಸ್ಸಾಂ ಜನತೆಗಾಗಿ ತನ್ನ ಸ್ಥಾನ, ಪಾರ್ಟಿಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದರು.
ಮಾಜಿ ವಿಧಾನಸಭಾ ಸ್ಪೀಕರ್ ಪುಲಕೇಶ್ ಬರೂಹ್ ಪಾರ್ಟಿಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಶಾಸಕ ಪದ್ಮ ಹಝಾರಿಕ ರಾಜೀನಾಮೆ ನೀಡಿದ್ದಾರೆ. ಬ್ರಹ್ಮಪುತ್ರದ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾನೂನು ಜಾರಿಮಾಡುವುದನ್ನು ಮರಪರಿಶೀಲಿಸಬೇಕೆಂದು ಸ್ಪೀಕರ್ ಹಿದೇಂದ್ರನಾರ್ಥ ಗೋಸ್ವಾಮಿ ಹೇಲಿದರು. ಪಾರ್ಟಿಯ ಕೆಳಹಂತದ ನಾಯಕರ ಸಾಮೂಹಿಕ ರಾಜೀನಾಮೆ ನಡೆಯಲಿದೆ ಎಂದು ಅಸ್ಸಾಂ ಗಣಪರಿಷತ್ ಸಮ್ಮತಿಸಿದೆ.












