ಲಕ್ನೊ ನದ್ವಾ ವಿಶ್ವವಿದ್ಯಾನಿಲಯದಲ್ಲಿಯೂ ಪ್ರತಿಭಟನೆಯ ಅಲೆ

0
961

ಸನ್ಮಾರ್ಗ ವಾರ್ತೆ-

ಲಕ್ನೊ, ಡಿ. 16: ಜಾಮಿಅ ಮಿಲ್ಲಿಯ, ಅಲಿಗಡ ಮುಸ್ಲಿಂ ಯುನಿವರ್ಸಿಟಿಗಳ ಬೆನ್ನಿಗೆ ಪೌರತ್ವ ಮಸೂದೆಯ ಪ್ರತಿಭಟನೆ ಲಕ್ನೊ ನದ್ವಾ ಕಾಲೇಜಿಗೂ ವ್ಯಾಪಿಸಿದೆ. ಜಾಮಿಅ ಮಿಲ್ಲಿಯ, ಅಲಿಗಡ ಮುಸ್ಲಿಂ ಯುನಿವರ್ಸಿಟಿಗಳ ವಿದ್ಯಾರ್ಥಿಗಳನ್ನು ಬೆಂಬಲಿಸಿ ಲಕ್ನೊ ನದ್ವಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ ಪ್ರತಿಭಟನೆಯ ಸಲುವಾಗಿ ಕ್ಯಾಂಪಸ್‍ನಲ್ಲಿ ಒಗ್ಗೂಡಿದರು. ಪ್ರತಿಭಟನಾಕಾರರನ್ನು ಎದುರಿಸಲು ಪೊಲೀಸರು ಕ್ಯಾಂಪಸ್‍ನ ಮುಖ್ಯ ದ್ವಾರ ಮುಚ್ಚಿದರು. ಪೊಲೀಸರ ಮೇಲೆ ವಿದ್ಯಾರ್ಥಿಗಳು ಕಲ್ಲೆಸೆದಿದ್ದಾರೆ.

ಜಾಮಿಯದಲ್ಲಿ ನಡೆದ ಪೊಲೀಸ್ ದೌರ್ಜನ್ಯವನ್ನು ಪ್ರತಿಭಟಿಸಿ ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ದೇಶದ ಪ್ರಮುಖ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೆಂಬಲ ಸೂಚಿಸಿ ಬೀದಿಗಿಳಿದರು. ಟಾಟ ಇನ್ಸ್‍ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸ್ ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿದ್ದಾರೆ.

ಇದೇವೇಳೆ ಜಾಮಿಅ ಮಿಲ್ಲಿಯ ವಿದ್ಯಾರ್ಥಿಗಳನ್ನು ಕ್ಯಾಂಪಸ್ ತೊರೆಯುವಂತೆ ಪೊಲೀಸರು ಹೇಳಿದ್ದಾರೆ. ಕ್ಯಾಂಪಸ್‍ನಿಂದ ಅವರನ್ನು ಇಂದು ತೆರವುಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದರು.