ಸನ್ಮಾರ್ಗ ವಾರ್ತೆ-
ತಿರುವನಂತಪುರಂ, ಜ. 6: ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಸಹಿಷ್ಣುತೆಯ ದಾಂಧಲೆ ಎಂದು ಹೇಳಿದ್ದಾರೆ. ಜೆಎನ್ಯು ಕ್ಯಾಂಪಸ್ಗೆ ನುಗ್ಗಿ ವಿದ್ಯಾರ್ಥಿ ಅಧ್ಯಾಪಕರನ್ನು ನಾಝಿಗಳ ಮಾದರಿಯಲ್ಲಿ ಹೊಡೆದವರು ದೇಶದಲ್ಲಿ ಅಸುರಕ್ಷಿತ ಪರಿಸ್ಥಿತಿ, ದಂಗೆಯನ್ನು ಸೃಷ್ಟಿಸಲು ಹೊರಟವರು ಎಂದು ಅವರು ಹೇಳಿದರು.
ದಾಳಿಯಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿ ಯೂನಿಯನ್ ನ ಅಧ್ಯಕ್ಷೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಆ೦ಬುಲೆನ್ಸ್ ತಡೆಯಲು ಎಬಿವಿಪಿಯವರು ಮುಂದಾದುದು ವರದಿಯಾಗಿದೆ. ಇದು ಗಲಭೆಯ ವ್ಯಾಪ್ತಿಯನ್ನು ಸೂಚಿಸುತ್ತಿದೆ. ಭಯೋತ್ಪಾದಕ ತಂಡದ ಸ್ವಭಾವದವರು ಕ್ಯಾಂಪಸ್ಗೆ ಮಾರಕ ಆಯುಧಗಳಿಂದ ಬಂದು ಹಲ್ಲೆ ಎಸಗಿದ್ದಾರೆ ಎಂದು ಪಿಣರಾಯಿ ಹೇಳಿದರು.
ಕ್ಯಾಂಪಸ್ನಲ್ಲಿ ರಕ್ತ ಸುರಿಸುವ ಅಪಾಯಕಾರಿ ಈ ಆಟದಿಂದ ಸಂಘಪರಿವಾರ ಶಕ್ತಿಗಳು ಹಿಂದೆ ಸರಿಯಬೇಕು. ವಿದ್ಯಾರ್ಥಿಗಳ ಧ್ವನಿ ಈ ನಾಡಿನ ಧ್ವನಿಯಾಗಿದೆ ಎಂದು ಅರಿತುಕೊಂಡರೆ ಒಳ್ಳೆಯದು ಎಂದು ಪಿಣರಾಯಿ ವಿಜಯನ್ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.












