ಅಯ್ಯಪ್ಪ ಭಕ್ತರಿಗೆ ಆಹಾರ ಬಡಿಸಿ, ಭಜನೆಗೆ ಚಪ್ಪರ ಸಿದ್ಧಪಡಿಸಿಕೊಟ್ಟ ಮುಸ್ಲಿಂ ಯುವಕರು

0
1141

ಸನ್ಮಾರ್ಗ ವಾರ್ತೆ-
ಕೇರಳ, ಜ. 6: ಪಾಲಕ್ಕಾಡ್ ಸಮೀಪದ ಮಂಕರದಲ್ಲಿ ನೂರಾರು ಅಯ್ಯಪ್ಪ ಭಕ್ತರಿಗೆ ಅನ್ನದಾನ ಮತ್ತು ಭಜನೆಗೆ ಪ್ರತ್ಯೇಕ ಸ್ಥಳವನ್ನು ಕಲ್ಲೂರಿನ ಮುಸ್ಲಿಮ್ ಯುವಕರು ವ್ಯವಸ್ಥೆ ಮಾಡಿ ಸೌಹಾರ್ದಕ್ಕೆ ಮಾದರಿಯಾಗಿದ್ದಾರೆ. ಸ್ವಾಮಿಗಳಿಗೆ ಆಹಾರ ಕೊಡುವುದರ ಜೊತೆಗೆ ಸ್ಥಳೀಯ ಸಾವಿರಾರು ಮಂದಿಗೆ ಇವರು ಆಹಾರ ಬಡಿಸಿದರು. ಎಲ್ಲ ವೆಚ್ಚವನ್ನು ಮುಸ್ಲಿಂ ಯುವಕರು ಭರಿಸಿದ್ದಾರೆ.

ಗೃಹಿಣಿಯರಾದ ಝೈನಬಾ, ಝುಬೈದಾ, ಬೀಫಾತುಮ್ಮ, ಹಾಜರಾ, ಲೈಲಾ, ರಾಫಿಯಾ, ಪ್ರೇಮಾ, ಇಂದಿರಾ, ಪಾರ್ವತಿ, ಕನಕಲತಾ, ಶೀಲಾ, ಕೋಮಲಂ, ಕುಮಾರಿಯರ ತಂಡ ಆಹಾರ ತಯಾರಿಸಿತು. ಭಕ್ತರು ಭಜನೆ ನಡೆಸಲು ಯುವಕರು ಚಪ್ಪರ ಸಿದ್ಧಪಡಿಸಿ ಚಾಪೆ ಹಾಸಿದರು. ಸುತ್ತಲೂ ವಿದ್ಯುದ್ದೀಪಾಲಂಕರಿಸಿದರು. ಪೂಜೆ ನಡೆಸುವ ಸೌಕರ್ಯವನ್ನು ಒದಗಿಸಿದರು. ಗುರುಸ್ವಾಮಿ ಕೃಷ್ಣಮೂರ್ತಿಯ ನೇತೃತ್ವದಲ್ಲಿ ನಡೆದ ಭಜನೆ ಒಂದು ಗಂಟೆಯವರೆಗೂ ನಡೆಯಿತು. ಅಂಗಡಿಯವರು ಬೇಗನೆ ಅಂಗಡಿ ಬಂದ್ ಮಾಡಿ ಭಜನೆಗೆ ಸಹಕರಿಸಿದರು. ಕಲ್ಲೂರ್ ಜುಮಾಮಸೀದಿ ಖತೀಬ್ ಸಿರಾಜುದ್ದೀನ್ ಪೈಝಿ ಸ್ಥಳದಲ್ಲಿದ್ದರು. ಶನಿವಾರ ಸಂಜೆ ಅನ್ನದಾನದ ಬಳಿಕ ನಡೆದ ಧರ್ಮ ಮೈತ್ರಿ ಗ್ರೂಪ್‍ನಲ್ಲಿ ಅವರು ಭಾಗವಹಿಸಿದರು. ಇಂತಹ ಸಂಗಮ ಮಾದರಿಯುತವೆಂದು ಫೈಝಿ ಮತ್ತು ಗುರುಸ್ವಾಮಿ ಹೇಳಿದರು. ಮಂಗರ ಕಲ್ಲೂರಿನಲ್ಲಿ ಅಯ್ಯಪ್ಪ ಭಕ್ತರಿಗೆ ಅನ್ನದಾನದ ಬಳಿಕ ಧರ್ಮಮೈತ್ರಿ ಸಂಗಮದಲ್ಲಿ ಕಲ್ಲೂರ್ ಜುಮಾಮಸೀದಿ ಕತೀಬ್ ಸಿರಾಜುದ್ದೀನ್ ಫೈಝಿ ಮಾತಾಡಿದರು.