ಅಣು ನಿಯಂತ್ರಣ ಒಪ್ಪಂದ: ಇನ್ನು ನಮ್ಮ ದಾರಿ ನಮಗೆ- ಇರಾನ್‍ನ ಬಿಗಿ ನಿಲುವು

0
1810

ಸನ್ಮಾರ್ಗ ವಾರ್ತೆ-
ಟೆಹ್ರಾನ್, ಜ. 6: ಅಣು ಆಯುಧಗಳು ಕೈಯಲ್ಲಿರಿಸುವುದು ಸಹಿತ 2015ರ ಒಪ್ಪಂದದ ನಿಯಂತ್ರಣವನ್ನು ಇನ್ನು ಪಾಲಿಸುವುದಿಲ್ಲ ಎಂದು ಇರಾನ್ ಹೇಳಿದೆ. ಇದೇವೇಳೆ ಒಪ್ಪಂದದ ಯುರೋಪಿಯನ್ ಪಾಲುದಾರರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಮುಗಿದಿಲ್ಲ ಎಂದು ಇರಾನ್ ತಿಳಿಸಿದೆ. ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯೊಂದಿಗೆ ಹಿಂದಿನಂತೆ ಇನ್ನು ಸಹಕರಿಸಲಾಗದು ಎಂದು ಇರಾನ್ ಸಚಿವಸಂಪುಟ ತೀರ್ಮಾನಿಸಿದೆ. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅಣು ಶಕ್ತಿ, ಸಂಸ್ಕರಣೆಯ ಉಪಕರಣಗಳ ಪ್ರಮಾಣ ಎಲ್ಲವೂ ಒಪ್ಪಂದದ ಮೂಲಕ ನಿಯಂತ್ರಣ ಇರಾನ್ ಪಾಲಿಸುತ್ತಿತ್ತು. ಇನ್ನು ಅದು ಆಗದು ಎಂದು ಸಚಿವಸಂಪುಟ ತೀರ್ಮಾನಿಸಿದೆ.

ಅಮೆರಿಕದ ವಾಯುದಾಳಿಯಲ್ಲಿ ಇರಾನಿನ ಸೇನಾ ಜನರಲ್ ಖಾಸಿಂ ಸುಲೇಮಾನಿ ಕೊಲೆಯಾದ ಬೆನ್ನಿಗೆ ಇರಾನ್ ಹೊಸ ತೀರ್ಮಾನಕ್ಕೆ ಬಂತು. ಒಪ್ಪಂದದಿಂದ ಹಿಂದೆ ಸರಿಯುವ ಕೊನೆಯ ಹಂತದ ಕ್ರಮಗಳು ಜಾರಿಯಲ್ಲಿವೆ. ಇನ್ನು ಇರಾನ್‍ನ ಅಣು ಯೋಜನೆಗೆ ಯಾವ ರೀತಿಯ ನಿರ್ಬಂಧವೂ ಇರುವುದಿಲ್ಲ. 2015ರಲ್ಲಿ ಇರಾನ್ ಅಣು ನಿಯಂತ್ರಣ ಒಪ್ಪಂದಕ್ಕೆ ಸಹಿಹಾಕಿತ್ತು. ಇನ್ನು ಒಪ್ಪಂದದ ನಿಯಂತ್ರಣ ಪಾಲಿಸುವುದಿಲ್ಲ ಎಂದು ಅದು ಹೇಳಿದೆ. ಇರಾನ್ ಇದರಿಂದ ಹಿಂದೆ ಸರಿಯಬೇಕೆಂದು ಫ್ರೆಂಚ್ ಅಧ್ಯಕ್ಷ ಇಮಾನ್ಯುವೇಲ್ ಮ್ಯಾಕ್ರೋನ್, ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ಜಂಟಿ ಹೇಳಿಕೆ ನೀಡಿ ಆಗ್ರಹಿಸಿದ್ದಾರೆ.