ಯಾರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ- ಅಮಿತ್ ಶಾ

0
1224

ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 6: ಪೌರತ್ವ ತಿದ್ದುಪಡಿ ಕಾನೂನು ಮೂಲಕ ಯಾರದೇ ಪೌರತ್ವವನ್ನು ತೆಗೆದುಹಾಕುವುದಿಲ್ಲ ಎಂದು ಅಮಿತ್ ಶಾ ಹೇಳಿದರು. ದೇಶದ ಅಲ್ಪಸಂಖ್ಯಾತರನ್ನು ಕಾಂಗ್ರೆಸ್, ಆಮ್ ಆದ್ಮಿಪಾರ್ಟಿ ದಾರಿ ತಪ್ಪಿಸುತ್ತಿದೆ. ಗಲಭೆ ಸೃಷ್ಟಿಯಾದದ್ದರ ಹೊಣೆಗಾರ ಈ ಎರಡು ಪಾರ್ಟಿಗಳು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ತಪ್ಪು ಕಲ್ಪನೆ ಹರಡುತ್ತಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದರು.

ಭಾರತವಿರೋಧಿ ಘೋಷಣೆಯನ್ನು ವಿದ್ಯಾರ್ಥಿಗಳು ಕೂಗುತ್ತಾರೆ. ಇಂತಹವರ ವಿರುದ್ಧ ಕ್ರಮ ಜರಗಿಸಲು ಕೇಜ್ರಿವಾಲ್ ಸರಕಾರ ಅನುಮತಿ ನೀಡುವುದಿಲ್ಲ ಎಂದು ಅಮಿತ್ ಶಾ ಆರೋಪಿಸಿದರು.