ಸನ್ಮಾರ್ಗ ವಾರ್ತೆ-
ಉಳ್ಳಾಲ: ಜ. ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಸೇಷನ್ ಆಫ್ ಇಂಡಿಯಾ ಉಳ್ಳಾಲ ಘಟಕ, ಫೆಟೆರ್ನಿಟಿ ಮೂವ್ ಮೆಂಟ್, ಗರ್ಲ್ಸ್ ಇಸ್ಲಾಮಿಕ್ ಅರ್ಗನೈಸೇಷನ್ ಆಫ್ ಇಂಡಿಯಾ ಉಳ್ಳಾಲ ಘಟಕದ ವತಿಯಿಂದ ಜೆ.ಏನ್.ಯು ವಿನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಗೊಂಡಾಯಿಸಂನನ್ನು ಖಂಡಿಸಿ ಉಳ್ಳಾಲದ ಸರ್ವೀಸ್ ಬಸ್ ಸ್ಟ್ಯಾಂಡ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಫೆಟರ್ನಿಟಿ ಮೂವ್ ಮೆಂಟ್ ಇದರ ಸಂಚಾಲಕರಾದ ತಫ್ಲೀಲ್ ಮಾತನಾಡಿ ” ಜೆ.ಏನ್.ಯು ದೇಶಕ್ಕೆ ಬೇಕಾದ ಹಲವಾರು ನಾಯಕರನ್ನು, ಸಂಪನ್ಮೂಲ ವ್ಯಕ್ತಿಗಳನ್ನು ಕೊಡುಗೆಯಿತ್ತ ದೇಶದ ಅತೀ ಉನ್ನತವಾದ ವಿದ್ಯಾಲಯವಾಗಿದೆ. ದೇಶದ ಕೀರ್ತಿಯನ್ನು ವಿಶ್ವದಾಚೆ ಕೊಂಡೊಯ್ದ ಸಂಸ್ಥೆ. ಆದರೆ ಇಂದು ಕೋಮುವಾದಿ ವಿಷ ತುಂಬಿದ ಒಂದು ಗುಂಡಾ ಸಂಘ ಪ್ರತಿಭಟನಾ ನಿರತವಾಗಿದ್ದ ವಿದ್ಯಾರ್ಥಿಗಳನ್ನು ಅನ್ಯಾಯವಾಗಿ ಹೊಡೆದು ವಿಶ್ವದಲ್ಲೇ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಹೇಯ ಕೃತ್ಯ ದೇಶದ ಭವಿಷ್ಯಕ್ಕೆ ಮಾರಕ. ಆದ್ದರಿಂದ ಇದನ್ನು ಈ ದೇಶದ ಪ್ರಜ್ಞಾವಂತರಾದ ವಿದ್ಯಾರ್ಥಿಗಳು ಖಂಡಿಸಬೇಕು” ಎಂದರು.
ನಂತರ ಮಾತನಾಡಿದ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮತ್ತು ಹೋರಾಟಗಾರರಾದ ಇಸ್ಮತ್ ಪಜೀರ್, “ಪ್ರತಿಭಟನೆಯು ಪ್ರಜಾ ಹಕ್ಕು. ಅದನ್ನು ಧಮನಿಸಲೆತ್ನಿಸುವುದು ಸರ್ವಾಧಿಕಾರದ ಧೋರಣೆ. ಪ್ರತಿಭಟನೆ ಮಾಡಲು ಬ್ರಿಟಿಷ್ ಅಧಿಕಾರಿಗಳ ಅನುಮತಿಗಾಗಿ ಕಾಯುತ್ತ ಕುಳಿತಿದ್ದರೆ ಇಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸುತ್ತಿರಲಿಲ್ಲ. ಕೋಮುವಾದಿ ಗೂಂಡಾಗಳು ವಿದ್ಯಾರ್ಥಿಗಳನ್ನು ಬೆದರಿಸುವುದು, ದಮನಿಸುವುದು ಜೆ.ಏನ್.ಯು ನಂತೆ ಭಾರತದ ಹೆಚ್ಚಿನ ಎಲ್ಲಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ. ಅದರ ವಿರುದ್ದ ಹೋರಾಟ ಮುಂದುವರಿಯಬೇಕು” ಎಂದರು.
ಎಸ್. ಐ.ಓ ರಾಜ್ಯ ಸಮಿತಿ ಸದಸ್ಯರಾದ ತಲ್ಹ ಇಸ್ಮಾಯಿಲ್ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ನಡೆದ ಕೃತ್ಯವನ್ನು ಖಂಡಿಸಿ ಕೋಮು ಕ್ರೋರಿಗಳು Phd ಮಾಡುತ್ತಿರುವ ಅಂಧ ವಿದ್ಯಾರ್ಥಿಯನ್ನು ಸಹ ಹೂಡೆದಿರುವುದು ಬಹಳ ದುಃಖ ಬರಿಸುತ್ತಿದೆ. ಕ್ಯಾಂಪಸ್ ನ ಒಳಗೆ ರಕ್ತ ಪಾತ ವಾಗುವುದಾದರೆ ದೇಶದ ಪರಿಸ್ಥಿತಿ ಎಲ್ಲಿ ವರೆಗೆ ತಲುಪಿದೆ ಎಂದು ನಾವು ಆಲೋಚಿಸಬೇಕು” ಎಂದರು. ಕೃತ್ಯವನ್ನು ಖಂಡಿಸಿ ಘೋಷಣೆ ಕೂಗಲಾಯಿತು. ನಿಝಾಮ್ ಕಾರ್ಯಕ್ರಮ ನಿರೂಪಿಸಿದರು.















