ಪೌರತ್ವ ಕಾನೂನು ವಿರುದ್ದ ಎಂಜಿ ವಿಶ್ವವಿದ್ಯಾನಿಲಯ ಯೂನಿಯನ್ ಪ್ರಸ್ತಾವ ಪಾಸು

0
1822

ಸನ್ಮಾರ್ಗ ವಾರ್ತೆ

ಕೇರಳ,ಜ.11: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಎಂಜಿ ವಿಶ್ವವಿದ್ಯಾನಿಲಯ ಯೂನಿಯನ್ ಪ್ರಸ್ತಾವ ಪಾಸು ಮಾಡಿದೆ. ಭಾರತದ ಸಂವಿಧಾನ ಕೊಡಮಾಡಿದ ಸಮಾನತೆಯ ತತ್ವಗಳನ್ನು ಕಾನೂನು ಉಲ್ಲಂಘಿಸುತ್ತಿದೆ. ಧರ್ಮದ ಆಧಾರದಲ್ಲಿ ಪೌರತ್ವ ತೀರ್ಮಾನಿಸುವುದು ಧರ್ಮರಾಷ್ಟ್ರ ನಿಲುವನ್ನು ಸಾಬೀತುಪಡಿಸುತ್ತದೆ. ಇದು ಸಂವಿಧಾನದ ಮೌಲ್ಯಗಳ ವಿರುದ್ಧವಾಗಿದೆ. ತೀರ್ಮಾನವನ್ನು ಮರುಪರಿಶೀಲನೆಗೊಳಪಡಿಸಬೇಕು ಮತ್ತು ಕಾನೂನು ರದ್ದುಪಡಿಸುವ ಕ್ರಮವನ್ನು ಕೇಂದ್ರ ಸರಕಾರ ಜರಗಿಸಬೇಕೆಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಯೂನಿಯನ್ ಜನರಲ್ ಕೌನ್ಸಿಲ್ ಒಕ್ಕೊರಳಿನಿಂದ ಪ್ರಸ್ತಾವ ಪಾಸುಮಾಡಿ ಆಗ್ರಹಿಸಿದೆ. ಯೂನಿಯನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಬ್ಬಾಸ್ ಪ್ರಸ್ತಾವ ಮಂಡಿಸಿದರು. ಅಧ್ಯಕ್ಷ ಅಮಲ್‍ರಾಜ್ ಅಧ್ಯಕ್ಷತೆ ವಹಿಸಿದ್ದರು.