ಸನ್ಮಾರ್ಗ ವಾರ್ತೆ
ಲಕ್ನೊ, ಜ.11: ಉತ್ತರ ಪ್ರದೇಶದಲ್ಲಿ ಟ್ರಕ್ ಮತ್ತು ಬಸ್ ಢಿಕ್ಕಿಯಾದ ಪರಿಣಾಮ ಬಸ್ಸಿಗೆ ಬೆಂಕಿ ಹಿಡಿದು 20 ಮಂದಿ ಮೃತಪಟ್ಟಿದ್ದಾರೆ. ಕನೌಜ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ. 21 ಮಂದಿ ಗಾಯಗೊಂಡಿದ್ದು ಅವರನ್ನು ರಕ್ಷಿಸಲಾಗಿದೆ. ಬಸ್ನಲ್ಲಿ 41 ಮಂದಿ ಪ್ರಯಾಣಿಕರಿದ್ದರು. ಜೈಪುರಕ್ಕೆ ಹೊರಟಿದ್ದ ಸ್ವೀಪರ್ ಖಾಸಿ ಬಸ್ ಟ್ರಕ್ ಮುಖಾಮುಖಿ ಢಿಕ್ಕಿಯಾಗಿದೆ. ನಾಲ್ಕು ಅಗ್ನಿಶಾಮಕ ದಳ ನಲ್ವತ್ತು ನಿಮಿಷ ಕಾರ್ಯಾಚರಣೆಯಿಂದ ಬೆಂಕಿಯನ್ನು ಆರಿಸಿತು. ರಕ್ಷಿಸಲಾಗಿರುವ 21 ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಮೋಹಿತ ಅಗರ್ವಾಲ್ ಹೇಳಿದರು. .
ಕನೌಜ್ನಲ್ಲಿ ನಡೆದ ಬಸ್ ಲಾರಿ ಅಪಘಾತ ನೋವು ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮೃತರ ಕುಟುಂಬಕ್ಕೆ ತನ್ನ ಶೋಕವನ್ನು ತಿಳಿಸಿದರು. ಗಾಯಾಗಳುಗಳು ಶೀಘ್ರ ಗುಣಮುಖರಾಗಲಿ ಎಂದು ಮೋದಿ ಹಾರೈಸಿದರು.












