ಸನ್ಮಾರ್ಗ ವಾರ್ತೆ
ಕೊಲ್ಕತಾ, ಜ. 15: ಪೌರತ್ವ ತಿದುಪಡಿ ಕಾನೂನು ಬೆಂಬಲಿಸಿ ನಡೆಸಲು ಹೊರಟ ಬಿಜೆಪಿಯ ರಾಲಿ ತಡೆಯುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ರವಿವಾರದಿಂದ ಪೊಲೀಸರು ಸೆಕ್ಷನ್ 144ರ ಪ್ರಕಾರ ನಿಷೇಧಾಜ್ಞೆ ಹೇರಿದ್ದು ಉಲ್ಲಂಘಿಸುವ ನಾಯಕರ ವಿರುದ್ಧ ಕೇಸು ದಾಖಲಿಸಲಾಗುತ್ತದೆ. ಈಗಾಗಲೇ ಉತ್ತರ ಪಶ್ಚಿಮ ಬಂಗಾಳದಲ್ಲಿ ಜನವರಿ ಹನ್ನೆರಡರಂದು ಪಶ್ಚಿಮ ಬಂಗಾಳ ಪ್ರಧಾನ ಕಾರ್ಯದರ್ಶಿ ಸಯಂದನ್ ಬಸು ವಿರುದ್ಧ ಕೇಸು ದಾಖಲಾಗಿದೆ. ಇನ್ನೋರ್ವ ಜಿಲ್ಲಾ ನಾಯಕಿ ಮಾಲತಿ ರವ ರೇಯ ವಿರುದ್ಧ ಕೇಸು ದಾಖಲಾಗಿದೆ.
ಸರಕಾರದ ತಂತ್ರಗಳ ವಿರುದ್ಧ ನಾವು ಕೊಲ್ಕತಾ ಹೈಕೋರ್ಟಿನ ಮೊರೆ ಹೋಗುತ್ತೇವೆ ಎಂದು ಬಿಜೆಪಿ ಹೇಳಿದೆ. ತೃಣಮೂಲ ಕಾಂಗ್ರೆಸ್ಗೆ ನಮ್ಮನ್ನು ಮೌನವಾಗಿರಿಸಲು ಸಾಧ್ಯವಿಲ್ಲ ಎಂದು ಬಸು ಹೇಳಿದರು. ಸೋಮವಾರ ದಿನಾಜ್ಪುರ ಜಿಲ್ಲೆಯ ಮಲ್ಗಲ್ಪುರಕ್ಕೆ ಹೊರಟಿದ್ದ ಬಸು ಮತ್ತು ಯುವ ಮೋರ್ಚ ಅಧ್ಯಕ್ಷ ಡೆಬಜಿತ್ ಸರಕಾರ್ ರನ್ನು ಪೊಲೀಸರು ತಡೆಹಿಡಿದಿದ್ದರು.












