ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 20: ರಾಬರ್ಟ್ ವಾದ್ರರ ಕಪ್ಪುಹಣ ವ್ಯವಹಾರ ಪ್ರಕರಣದಲ್ಲಿ ಕೇರಳದ ಅನಿವಾಸಿ ಉದ್ಯಮಿ ಸಿ ಸಿ ತಂಬಿ ಎಂಬವರನ್ನು ಬಂಧಿಸಲಾಗಿದೆ. ಸಿಸಿ ತಂಬಿಯನ್ನು ಎಂಪೋರ್ಸ್‍ಮೆಂಟ್ ಡೈರಕ್ಟರೇಟ್ ಬಂಧಿಸಿದ್ದು ರಾಬರ್ಟ್ ವಾದ್ರರ ವ್ಯವಹಾರ, ಭೂವ್ಯವಹಾರವನ್ನು ತಂಬಿಯವರ ಹೊಲಿಡೇ ಗ್ರೂಪ ಮೂಲಕ ನಡೆಸಲಾಗಿದೆ ಎಂದು ಇಡಿ ಹೇಳಿದೆ.
ರಾಬರ್ಟ್ ವಾದ್ರರ ಕಪ್ಪುಹಣ ಪ್ರಕರಣ, ಭೂವ್ಯವಹಾರ ಪ್ರಕರಣದಲ್ಲಿ ಸಿಸಿ ತಂಬಿಯವರನ್ನು ಇಡಿ ಈ ಹಿಂದೆ ವಿಚಾರಣೆ ನಡೆಸಿತ್ತು. ಸೋನಿಯಾ ಗಾಂಧಿ ಪಿ ಎ ತನಗೆ ರಾಬರ್ಟ್ ವಾದ್ರಾರನ್ನು ಪರಿಚಯಿಸಿದ್ದೆಂದು ಅವರು ಹೇಳಿಕೆ ನೀಡಿದ್ದರು. ಇದೇ ವೇಳೇ ,ವಿಮಾನ ಪ್ರಯಾಣದ ವೇಳೆ ಸಿ ಸಿ ತಂಬಿ ಪರಿಚತರಾಗಿದ್ದರು ಎಂದು ವಾದ್ರ ಇಡಿಗೆ ಹೇಳಿಕೆ ನೀಡಿದ್ದರು. ಇಬ್ಬರ ಹೇಳಿಕೆಯ ವ್ಯತ್ಯಾಸ ಇರುವ ಕಾರಣ ಇಡಿ ನೋಟಿಸು ಜಾರಿಗೊಳಿಸಿತ್ತು.
ದುಬೈ, ಕೇರಳದಲ್ಲಿ ಹಲವಾರ ಉದ್ಯಮವನ್ನು ಸಿ ಸಿ ತಂಬಿ ಹೊಂದಿದಾರೆ. ಅನಧಿಕೃತ ಹಣ ಉಪಯೋಗಿಸಿ ಲಂಡನ್‍ನಲ್ಲಿ 26 ಕೋಟಿಯ ಪ್ಲಾಟ್ ಮತ್ತು ದುಬೈಯಲ್ಲಿ 14 ಕೋಟಿಯ ವಿಲ್ಲಾ ಮತ್ತು ಗುರುಗ್ರಾಮ ಸಹಿತ ಹಲವು ಕಡೆ ಆಸ್ತಿಗಳನ್ನು ವಾದ್ರಾ ಸಂಪಾದಿಸಿದ್ದಾರೆಂದು ಕೇಸು ದಾಖಲಾಗಿದೆ.












