ಸನ್ಮಾರ್ಗ ವಾರ್ತೆ
ಅಹ್ಮದಾಬಾದ್, ಜ. 24: ಸಬರಮತಿ ಸೆಂಟ್ರಲ್ ಜೈಲಿನಿಂದ ಜಾಮೀನು ಪಡೆದು ಹೊರಬಂದ ಕೂಡಲೇ ಕಾಂಗ್ರೆಸ್ ನಾಯಕ ಹಾರ್ದಿಕ ಪಟೇಲ್ರನ್ನು ಪುನಃ ಗುಜರಾತ್ ಪೊಲೀಸರು ಬಂಧಿಸಿದರು. 2015ರ ದೇಶದ್ರೋಹ ಪ್ರಕರಣದಲ್ಲಿ ವಿಚಾರಣಾ ಕೋರ್ಟಿನ ಮುಂದೆ ಹಾಜರಾಗಲು ವಿಫಲವಾಗಿದ್ದಾರೆ ಎಂದು ಅವರನ್ನು ಬಂಧಿಸಲಾಗಿತ್ತು.
ನಾಲ್ಕು ದಿವಸದ ಬಳಿಕ ಅಹ್ಮದಾಬಾದಿನ ಸ್ಥಳೀಯ ಕೋರ್ಟಿನಿಂದ ಜಾಮೀನು ಪಡೆದು ಹೊರಬಂದಾಗ 2017ರಲ್ಲಿ ಪೊಲೀಸರ ಅನುಮತಿಯಿಲ್ಲದೆ ರ್ಯಾಲಿ ಮಾಡಿದ ಪ್ರಕರಣದಲ್ಲಿ ಹಾರ್ದಿಕರನ್ನು ಗುಜರಾತ್ ಪೊಲೀಸರು ಪುನಃ ಬಂಧಿಸಿದ್ದಾರೆ. ಇದಕ್ಕಾಗಿ ಜೈಲಿನ ಹೊರಗೆ ಪೊಲೀಸರು ಹಾಜರಿದ್ದರು. ಮೀಸಲಾತಿ ಹೋರಾಟಕ್ಕೆ ನೇತೃತ್ವ ನೀಡಿದ್ದ ಹಾರ್ದಿಕ್ 2019ರ ಲೋಕಸಭಾ ಚುನಾವಣೆಗಿಂತ ಸ್ವಲ್ಪ ಮೊದಲು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.












