ಸೌದಿಯಲ್ಲಿ ಅಮೆಝಾನ್ ಬಹಿಷ್ಕಾರ ಅಭಿಯಾನ

0
1238

ಸನ್ಮಾರ್ಗ ವಾರ್ತೆ

ರಿಯಾದ್, ಜ. 24: ಅಮೆಝಾನ್ ಸಿಇಒ ಜೆಫ್ ಬೆಸೋಸ್‍ರ ಫೋನ್ ಸೋರಿಕೆಯ ಹಿಂದೆ ಸೌದಿ ಅರೇಬಿಯ ರಾಜಕುಮಾರ್ ಮುಹಮ್ಮದ್ ಬಿನ್ ಸಲ್ಮಾನ್ ಇದ್ದಾರೆ ಎಂದು ಆರೋಪ ಕೇಳಿ ಬಂದ ನಂತರ ಸೌದಿಯಲ್ಲಿ ಅಮೆಝಾನ್ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ. ಅಮೆಝಾನ್ ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್ ಬಹಿಷ್ಕರಿಸಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಕರೆ ನೀಡಿದ ಪೋಸ್ಟ್ ಗಳು ತುಂಬಿಕೊಂಡಿವೆ. ಸೌದಿಯಲ್ಲಿ ಟ್ವಿಟರ್, ಫೇಸ್‍ಬುಕ್‍ಗಳಲ್ಲಿ ಈಗ ಇದು ಟ್ರೆಂಡಿಂಗಾಗಿದೆ.

ಗುರುವಾರ ಬೆಳಗ್ಗೆ ಅಮೆಝಾನ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿ ಮೊದಲ ಪೋಸ್ಟ್ ಹೊರಬಂದಿತ್ತು. ನಂತರ ಜೆಫ್ ಬೆಸೋಸ್‍ ರ ಚಿತ್ರವೂ ಅಮೆಝಾನ್ ಲೋಗೊದ ಪೋಸ್ಟ್ ಗಳೂ ಪ್ರಚಾರವಾಯಿತು. ಅಮೆಝಾನ್ ವಿರುದ್ಧ ಒಗ್ಗಟ್ಟಿನ ಬಹಿಷ್ಕಾರ ಕಾರ್ಯ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮ ತಜ್ಞರು ಹೇಳಿದ್ದಾರೆ.

2018ರಲ್ಲಿ ಫೋನ್ ಹ್ಯಾಕಿಂಗ್ ನಡೆದಿದೆ ಎಂದು ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿತ್ತು. ಪತ್ರಕರ್ತ ಜಮಾಲ್ ಕಶೋಗಿ ಕೊಲೆಗೆ ಸಂಬಂಧಿಸಿ ವಾಷಿಂಗ್ಟನ್ ಪೋಸ್ಟ್ ನಲ್ಲಿ ಬಂದ ವರದಿಗಳಿಗೂ ಜೆಫ್ ಬೆಸೋಸ್‍ ರ ಮೊಬೈಲ್ ಫೋನ್ ಹಾಕಿಂಗ್ ಗೂ ಪರಸ್ಪರ ಸಂಬಂಧ ಇದೆ ಎಂದು ವರದಿಗಳು ಬಂದಿದ್ದವು. ಜಮಾಲ್ ಕಶೋಗಿ ಕೆಲಸ ಮಾಡಿದ ವಾಷಿಂಗ್ಟನ್ ಪೋಸ್ಟ್ ಮಾಲಕ ಕೂಡ ಬೆಸಾಸ್ ಆಗಿದ್ದಾರೆ.