ಸನ್ಮಾರ್ಗ ವಾರ್ತೆ
ಪಾಟ್ನ, ಜ. 25: ಬುರ್ಕ ಧರಿಸುವುದನ್ನು ನಿಷೇಧಿಸಿ ಪಾಟ್ನದ ಜೆ ಡಿ ವುಮನ್ಸ್ ಕಾಲೇಜು ಹೊಸ ನಿಯಮವನ್ನು ಅಳವಡಿಸಿಕೊಂಡಿದೆ. ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ 250 ರೂಪಾಯಿ ದಂಡ ಹೇರಲಾಗುತ್ತದೆ. ಉಡುಪು ನಿಯಮವನ್ನು ಪಾಲಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರಬೇಕು ಎಂದು ಕಡ್ಡಾಯ ಮಾಡಲಾಗಿದೆ.
ಬುರ್ಕಾ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಶನಿವಾರ ನಿಷೇಧಕ್ಕೆ ತೆರವಿದೆ. ಇದೇವೇಳೆ ಸಕ್ರ್ಯುಲರ್ ವಿವಾದ ಸೃಷ್ಟಿಸಿದ್ದರಿಂದ ಸಕ್ರ್ಯುಲರ್ ಹಿಂಪಡೆಯಲಾಗುವುದು ಎಂದು ಕಾಲೇಜು ಪ್ರಾಂಶುಪಾಲ ಶ್ಯಾಮ ರಾಯ್ ಹೇಳಿಕೆ ನೀಡಿದ್ದಾರೆ.












