ಪಾಕಿಸ್ತಾನ, ಬಾಂಗ್ಲಾದೇಶದ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕು- ಶಿವಸೇನೆ

0
994

ಸನ್ಮಾರ್ಗ ವಾರ್ತೆ

ಮುಂಬೈ, ಜ. 24: ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಬಂದಿರುವ ಮುಸ್ಲಿಮರನ್ನು ಭಾರತದಿಂದ ಹೊರಗೆ ಹಾಕಬೇಕಾಗಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ. ಮಹಾರಾಷ್ಟ್ರದ ಮಿತ್ರ ಪಕ್ಷಗಳಾದ ಕಾಂಗ್ರೆಸ್, ಎನ್‍ಸಿಪಿಗಿಂತ ಭಿನ್ನವಾದ ನಿಲುವನ್ನು ಶಿವಸೇನೆ ವ್ಯಕ್ತಪಡಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಬಂದಿರುವ ಮುಸ್ಲಿಮರನ್ನು ಹೊರಗೆ ಹಾಕುವ ವಿಷಯದಲ್ಲಿ ಎರಡು ಮಾತಿಲ್ಲ. ಹಿಂದುತ್ವಕ್ಕಾಗಿ ಹೋರಾಟದಲ್ಲಿ ಶಿವಸೇನೆಯೂ ಇರಲಿದೆ. ಸಿಎಎಯಲ್ಲಿ ಹಲವಾರು ಲೋಪಗಳಿವೆ ಎಂದು ಸಾಮ್ನಾ ಸಂಪಾದಕೀಯ ಆರೋಪಿಸಿದೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಕೂಡ ಸಂಪಾದಕೀಯದಲ್ಲಿ ಶಿವಸೇನೆ ಟೀಕಿಸಿದೆ. ಹದಿನಾಲ್ಕು ವರ್ಷ ಹಿಂದೆ ಮರಾಠ ಘೋಷಣೆಯೊಂದಿಗೆ ರಾಜ್ ಠಾಕರೆ ಎಂಎನ್‍ಎಸ್ ಸ್ಥಾಪಿಸಿದ್ದರು. ಈಗ ಹಿಂದುತ್ವಕ್ಕಾಗಿ ಹೆಜ್ಜೆ ಬದಲಾಯಿಸಿದೆ. ಬಿಜೆಪಿಯಿಂದ ಎಂಎನ್‍ಎಸ್‍ಗೆ ಏನೂ ಸಿಗುವುದಿಲ್ಲ ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.