ಪತ್ರಕರ್ತನ ವಿರುದ್ಧ ಬೆದರಿಕೆ ಹಾಕಿದ ಸೇನ್ ಕುಮಾರ್ ವಿರುದ್ಧ ಕೇಸು

0
582

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಜ. 25: ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿದ ಕೇರಳದ ಮಾಜಿ ಡಿಜಿಪಿ ಟಿ.ಪಿ ಸೇನ್‍ಕುಮಾರ್ ವಿರುದ್ಧ ಕೇಸು ದಾಖಲಿಸಲಾಗಿದೆ. ಸೇನ್‍ಕುಮಾರ್, ಸುಭಾಶ್ ವಾಸು ಸಹಿತ ಹತ್ತು ಮಂದಿಯ ವಿರುದ್ಧ ತಿರುವನಂತಪುರಂ ಕಂಟೋಟ್‍ಮೆಂಟ್ ಪೊಲೀಸ್ ಎಫ್‍ಐಆರ್ ತಯಾರಿಸಿದ್ದಾರೆ.

ತಿರುವನಂತಪುರಂ ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಕಡವಿಲ್ ರಷೀದ್‍ರನ್ನು ಸೇನ್ ಕುಮಾರ್ ಅಪಮಾನಿಸಿ ಬೆದರಿಕೆ ಹಾಕಿದ್ದರು. ಪತ್ರಕರ್ತ ಮದ್ಯಪಾನ ಮಾಡಿದ್ದಾರೆ ಎಂದು ಸೇನ್ ಕುಮಾರ್ ಹೇಳಿದ್ದರು. ಸೇನ್‍ಕುಮಾರ್ ಜೊತೆಗೆ ಇದ್ದವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿ ಹೊರದಬ್ಬಲು ಯತ್ನಿಸಿದರು.

ಬೇರೆ ಪತ್ರಕರ್ತರು ಅಡ್ಡ ಬಂದು ರಷೀದ್‍ಗೆ ಹಲ್ಲೆ ಮಾಡದಂತೆ ತಡೆದಿದ್ದರು. ಸೇನ್‍ಕುಮಾರ್ ರನ್ನು ಡಿಜಿಪಿ ಮಾಡಿದ್ದು ತನ್ನ ತಪ್ಪೆಂದು ರಮೇಶ್ ಚೆನ್ನಿತ್ತಲ ಹೇಳಿಕೆಯ ಕುರಿತು ರಷೀದ್ ಪ್ರಶ್ನಿಸಿದ್ದು ಸೇನ್‍ಕುಮಾರ್ ರೇಗುವುದಕ್ಕೆ ಕಾರಣವಾಗಿತ್ತು.