ಸನ್ಮಾರ್ಗ ವಾರ್ತೆ
ಬ್ರಸಲ್ಸ್/ಹೊಸದಿಲ್ಲಿ, ಜ. 27: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪ್ರಸ್ತಾಪವನ್ನು ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟು ಚರ್ಚಿಸಲಿದೆ. ಆರರಲ್ಲಿ ಐದು ಪ್ರಸ್ತಾವಗಳು ಕೂಡ ನರೇಂದ್ರ ಮೋದಿ ಸರಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿವೆ. ಇದೇವೇಳೆ ಯುರೋಪಿನ ಕ್ರಮವನ್ನು ಭಾರತ ವಿರೋಧಿಸಿತು. ಜಗತ್ತಿಲ್ಲಿ ದೊಡ್ಡ ಅಸ್ತಿತ್ವ ಸಮಸ್ಯೆಯನ್ನು ಭಾರತದ ಪೌರತ್ವ ತಿದ್ದುಪಡಿ ಕಾನೂನು ಸೃಷ್ಟಿಸುತ್ತಿದೆ ಎಂದು ಯುರೋಪಿಯನ್ ಯೂನಿಯನ್ ಪ್ರಸ್ತಾವದಲ್ಲಿ ಬೆಟ್ಟು ಮಾಡಿ ತೋರಿಸಿದೆ. ಅಪಾಯಕಾರಿ ಬದಲಾವಣೆ ಎಂದು ಭಾರತ ಸರಕಾರವನ್ನು ವಿಶ್ಲೇಷಿಸಿತು. ಮುಂದಿನವಾರ ಪ್ರಸ್ತಾವ ಮತಕ್ಕೆ ಹಾಕಲಾಗುತ್ತಿದ್ದು 26 ದೇಶಗಳ 154 ಸಂಸದರು ಪ್ರಸ್ತಾವದ ಪರ ಇದ್ದಾರೆ.
ಒಟ್ಟು ಆರು ಪ್ರಸ್ತಾವಗಳು ಯುರೋಪಿಯನ್ ಯೂನಿಯನ್ ಮಂಡಿಸಿದ್ದು ಇದರಲ್ಲಿ ಒಂದು ಪ್ರಸ್ತಾವ ಮಾತ್ರ ಪೌರತ್ವ ಕಾನೂನನ್ನು ಬೆಂಬಲಿಸಿದ್ದಾಗಿದೆ. ಆದರೆ ಪೌರತ್ವ ಕಾನೂನು ಪ್ರತಿಭಟನೆಗಳ ವಿರುದ್ಧ ಸುರಕ್ಷಾ ಸೇನೆ ಬಲಪ್ರಯೋಗಿಸಿದ್ದನ್ನು ನಿಷ್ಪಕ್ಷ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.
ಬುಧವಾರ, ಗುರುವಾರ ಪ್ರಸ್ತಾವ ಮಂಡನೆಯಾಗಲಿದ್ದು ಚರ್ಚೆಯ ಬಳಿಕ ಮತದಾನ ನಡೆಯಲಿದೆ ಎಂದು ವರದಿಯಾಗಿದೆ. ಯುರೋಪಿಯನ್ ಯೂನಿಯನ್ ಕ್ರಮದ ವಿರುದ್ಧ ಭಾರತ ರಂಗಪ್ರವೇಶಿಸಿದ್ದು ಪೌರತ್ವ ಕಾನೂನು ಭಾರತದ ಆಂತರಿಕ ವಿಷಯವಾಗಿದೆ ಎಂದು ಭಾರತದ ಮೂಲಗಳು ಪ್ರತಿಕ್ರಿಯಿಸಿವೆ. ಪಾರ್ಲಿಮೆಂಟಿನ ಎರಡು ಸಭೆಯಲ್ಲಿ ಚರ್ಚಿಸಿ ಪ್ರಜಾಪ್ರಭುತ್ವ ಕ್ರಮದ ಪ್ರಕಾರ ಕಾನೂನು ಅಸ್ತಿತ್ವಕ್ಕೆ ಬಂದಿದೆ ಎಂದು ಭಾರತ ವಾದಿಸಿದೆ. ಮಾರ್ಚ್ 13ಕ್ಕೆ ಬ್ರಸಲ್ಸ್ ನಲ್ಲಿ ನಡೆಯುವ ಇಂಡಿಯ-ಯುರೋಪಿಯನ್ ಯೂನಿಯನ್ ಶೃಂಗದಲ್ಲಿ ಪ್ರಧಾನಿ ಭಾಗವಹಿಸಲಿರುವಂತೆ ಭಾರತದ ವಿರುದ್ಧ ಪ್ರಸ್ತಾವ ಬಂದಿರುವುದು ಗಮನಾರ್ಹ.












