ಸಿಎಎ ಕರಡು ನಿಯಮಗಳು ಸಿದ್ಧ; ಕರಡಿನಲ್ಲಿ ಧಾರ್ಮಿಕ ದೌರ್ಜನ್ಯ ಪದ ಸೇರಿಸಿಲ್ಲ- ವರದಿ

0
859

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 28: ಪೌರತ್ವ ತಿದ್ದುಪಡಿ ಕಾನೂನಿನ ಕರಡು ನಿಯುಮಗಳು ತಯಾರಾಗಿವೆ ಎಂದು ವರದಿಯಾಗಿದೆ. ಕರಡಿನಲ್ಲಿ ಧಾರ್ಮಿಕ ದೌರ್ಜನ್ಯ ಎಂಬುದನ್ನು ಈವರೆಗೆ ಸೇರಿಸಿಲ್ಲ ಎನ್ನಲಾಗಿದೆ. ಇದರೊಂದಿಗೆ 2014 ಡಿಸೆಂಬರ್ 31ಕ್ಕೆ ಮೊದಲು ಇತರ ದೇಶಗಳಿಂದ ಭಾರತಕ್ಕೆ ಬಂದು ಮುಸ್ಲಿಮೇತರರಿಗೆ ಕಾನೂನು ಪ್ರಕಾರ ಪೌರತ್ವ ಸಿಗಲಿದೆ.

ಸಿಎಎ ಕಾನೂನು ಪ್ರಕಾರ ಭಾರತದ ಪೌರತ್ವ ಲಭಿಸಲು ಧರ್ಮವನ್ನು ವ್ಯಕ್ತಪಡಿಸುವ ದಾಖಲೆಯನ್ನು ಮಾತ್ರ ಹಾಜರು ಪಡಿಸಿದರೆ ಸಾಕು. ಸಿಎಎಯ ವಿರುದ್ಧ ಅರ್ಜಿಗಳು ಸುಪ್ರೀಂಕೊರ್ಟಿನ ಪರಿಗಣನೆಯಲ್ಲಿರುವಾಗ ಕಾನೂನು ಜಾರಿಗೆ ತರಲುವ ಶೀಘ್ರ ಕ್ರಮಗಳೊಂದಿಗೆ ಸರಕಾರ ಮುಂದೆ ಸಾಗುತ್ತಿದೆ.

ವಿದೇಶಗಳಲ್ಲಿ ಧಾರ್ಮಿಕ ಹಿಂಸೆ ಅನುಭವಿಸಿದ ಹಿಂದೂ, ಸಿಖ್, ಬುದ್ಧ, ಕ್ರೈಸ್ತ, ಜೈನ, ಪಾರ್ಸಿ ಧರ್ಮದವರಿಗೆ ಸಿಎಎಯಲ್ಲಿ ಪೌರತ್ವ ನೀಡಲಾಗುವುದು. 2014 ಡಿಸೆಂಬರ್ 31ಕ್ಕಿಂತ ಮೊದಲು ಭಾರತಕ್ಕೆ ಬಂದವರಿಗೆ ಈ ರೀತಿ ಪೌರತ್ವ ಸಿಗಲಿದೆ. ಪಾರ್ಲಿಮೆಂಟು ಮತ್ತು ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಡಿಸೆಂಬರ್ ಹನ್ನೆರಡಕ್ಕೆ ಪಾಸು ಆಗಿದ್ದು ಡಿಸೆಂಬರ್ ಹನ್ನೆರಡರಂದು ರಾಷ್ಟ್ರಪತಿ ಅಂಕಿತವೂ ಆಗಿದೆ.