ಸನ್ಮಾರ್ಗ ವಾರ್ತೆ
ಭೋಪಾಲ, ಜ. 28: ಮಧ್ಯಪ್ರದೇಶ ಸರಕಾರವು ಶ್ರೀಲಂಕಾದಲ್ಲಿ ಸೀತಾ ಕ್ಷೇತ್ರವನ್ನು ಕಟ್ಟಿಸಲು ಸಜ್ಜಾಗಿದೆ. ಮುಖ್ಯಮಂತ್ರಿ ಕಮಲನಾಥ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡುತ್ತಿದ್ದು ನಿಧಿ ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿ ಅಧಿಕಾರಿಗಳು ನಿರ್ದೇಶ ನೀಡಿದರು. ಶ್ರೀಲಂಕಾದ ಮಹಾಬೋಧಿ ಸಮೂಹವನ್ನು ನಿರ್ಮಾಣ ಕಾರ್ಯದಲ್ಲಿ ಪಾಲ್ದಾರರನ್ನಾಗಿಸಲು ಮಧ್ಯಪ್ರದೇಶ ಸರಕಾರ ನಿರ್ದೇಶಿಸಿದೆ. ಮಧ್ಯಪ್ರದೇಶ ಸರಕಾರದ ಪಬ್ಲಿಕ್ ರಿಲೇಶನ್ಸ್ ಅಧಿಕಾರಿಯು ಸೀತಾ ಮಂದಿರ ನಿರ್ಮಿಸುವ ವಿವರ ನೀಡಿದ್ದಾರೆ. ಮಂದಿರದ ವಿನ್ಯಾಸ ತೀರ್ಮಾನಿಸಲು ಈ ವರ್ಷ ನಿಧಿ ಒದಗಿಸಲು ಮುಖ್ಯಮಂತ್ರಿ ಕಮಲನಾಥ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಸೀತಾ ಮಂದಿರದ ಜೊತೆಗೆ ಸಾ೦ಚಿಯ ಬುದ್ಧ ಸ್ತೂಫ ಅಭಿವೃದ್ಧಿಯು ಮಧ್ಯಪ್ರದೇಶ ಸರಕಾರದ ವಿಷಯ ಸೂಚಿಯಲ್ಲಿದೆ. ಸಾಂಚಿಗೆ ಬರುವ ಬುದ್ಧಧರ್ಮ ತೀರ್ಥಯಾತ್ರಿಕರಿಗೆ ಹೆಚ್ಚಿನ ಸೌಕರ್ಯ ಒದಗಿಸುವುದು ಸರಕಾರದ












