ಕೊರೊನಾ ಪೀಡಿತ ವುಹಾನ್‍ನಿಂದ 324 ಪ್ರಯಾಣಿಕರೊಂದಿಗೆ ಮೊದಲ ವಿಮಾನ ಬಂತು

0
1515

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 1: ಚೀನದ ಕೊರೊನಾ ಪೀಡಿತ ಪ್ರದೇಶ ವುಹಾನ್‍ನಿಂದ ಭಾರತೀಯರನ್ನು ಕರೆತಂದ ಮೊದಲ ವಿಮಾನ ತಲುಪಿದೆ. ಏರ್ ಇಂಡಿಯ ಬೊಯಿಂಗ್ 747 ವಿಮಾನ ಇಂದು ಬೆಳಗ್ಗೆ ದಿಲ್ಲಿಯಲ್ಲಿ ಬಂದು ಇಳಿಯಿತು. 324 ಪ್ರಯಾಣಿಕರು ವಿಮಾನದಲ್ಲಿದ್ದಾರೆ. ವಿಮಾನದ ಪ್ರಯಾಣಿಕರಲ್ಲಿ ಹೆಚ್ಚಿನವರು ಚೀನದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು. 324 ಮಂದಿಯಲ್ಲಿ 211 ವಿದ್ಯಾರ್ಥಿಗಳು. ಮೂವರು ಅಪ್ರಾಪ್ತ ಮಕ್ಕಳು. ಇವರನ್ನು ಹರಿಯಾಣದ ಮಾನೆಸರ್ ನ ಐಸೊಲೇಶ್ ಶಿಬಿರಕ್ಕೆ ಕರೆದುಕೊಂಡು ಹೋಗಲಾಗುವುದು. ಸೇನೆಯ ನೇತೃತ್ವದಲ್ಲಿ ಐಸೊಲೇಶನ್ ಶಿಬಿರ ಸ್ಥಾಪಿಸಲಾಗಿದೆ. ಹದಿನಾಲ್ಕು ದಿವಸ ಇವರನ್ನು ಅಲ್ಲಿ ಇರಿಸಲಾಗುವುದು. ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಏರ್‍ಪೋರ್ಟ್ ಹೆಲ್ತ್ ಅಥಾರಿಟಿ,

ಸೇನೆಯ ವೈದ್ಯಕೀಯ ತಂಡವು ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿದೆ. ಇವರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡವರನ್ನು ಬಿಎಚ್‍ಡಿಸಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಉಳಿದವರನ್ನು ಹರಿಯಾಣದ ಸೇನೆಯ ಐಸೊಲೇಶನ್ ಕೇಂದ್ರಕ್ಕೆ ಕರೆದೊಯ್ಯಲಾಗುವುದು.