ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 3: ಜಾಮಿಅ ಮಿಲ್ಲಿಯ ವಿಶ್ವವಿದ್ಯಾನಿಲಯದ ಗುಂಡು ಹಾರಾಟ ಘಟನೆಯನ್ನು ಚರ್ಚಿಸಬೇಕೆಂದು ಆಗ್ರಹಿಸಿ ಲೋಕಸಭೆಯಲ್ಲಿ ಮುಸ್ಲಿಂ ಲೀಗ್ ತುರ್ತು ಪ್ರಸ್ತಾವಕ್ಕೆ ನೋಟಿಸು ನೀಡಿದೆ. ಲೀಗ್ ಸಂಸದ ಪಿ.ಕೆ. ಕುಂಞಲಿಕುಟ್ಟಿ ತುರ್ತು ಪ್ರಸ್ತಾವಕ್ಕೆ ಅನುಮತಿ ಕೋರಿ ನೋಟಿಸು ನೀಡಿದರು. ದಿಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಸಂಸದ ಪರ್ವೇಶ್ ವರ್ಮ ಅವರ ಪ್ರಚೋದನಕಾರಿ ಹೇಳಿಕೆಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸಬೇಕೆಂದು ಲೀಗ್ ಆಗ್ರಹಿಸಿದೆ.
ಜಾಮಿಅದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವವರ ವಿರುದ್ಧ ಗುಂಡು ಹಾರಾಟ ನಡೆದಿದೆ. ಸಾಮುದಾಯಿಕ ಸೌಹಾರ್ದ ನಾಶಪಡಿಸುವುದು ಮತ್ತು ಕೋಮುವಾದ ಸೃಷ್ಟಿಸುವ ರೀತಿಯ ಹೇಳಿಕೆಯನ್ನು ಕೇಂದ್ರ ಸಚಿವ, ಬಿಜೆಪಿ ಸಂಸದ ನೀಡಿದ್ದಾರೆ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ.












