ಕೇವಲ ಒಂಬತ್ತೇ ದಿವಸ, 1000 ಹಾಸಿಗೆಯ ಆಸ್ಪತ್ರೆ: ಜಗತ್ತನ್ನೇ ಬೆರಗುಗೊಳಿಸಿದ ಚೀನ

0
3467

ಸನ್ಮಾರ್ಗ ವಾರ್ತೆ

ಬೀಜಿಂಗ್, ಜ. 3: ಕೊರೊನಾ ವೈರಸ್ ತಗಲಿದವರ ಚಿಕಿತ್ಸೆಗಾಗಿ ಚೀನ ಒಂಬತ್ತು ದಿವಸದಲ್ಲಿ 1000 ಬೆಡ್‍ಗಳಿರುವ ಬೃಹತ್ ಆಸ್ಪತ್ರೆಯನ್ನು ನಿರ್ಮಿಸಿದೆ. ಕೊರೊನಾ ಹಾವಳಿಯಿರುವ ವುಹಾನದಲ್ಲಿ ವುವೊಶೇಶನ್ ಎಂಬ ಆಸ್ಪತ್ರೆ ದಾಖಲೆಯ ವೇಗದಲ್ಲಿ ನಿರ್ಮಾಣಗೊಂಡಿದ್ದು ರವಿವಾರ ನಿರ್ಮಾಣ ಕಾರ್ಯ ನಡೆದಿದೆ. ಆಸ್ಪತ್ರೆ ಇಂದಿನಿಂದ ಕಾರ್ಯವೆಸಗಲಿದೆ.

ಕೊರೊನಾ ವೈರಸ್ ಗಾಳಿಯಿಂದ ಹರಡುತ್ತದೆ ಎನ್ನಲಾಗಿದ್ದು ಇತರ ರೋಗಿಗಳ ಜೊತೆ ಕೊರೊನಾದಿಂದ ಬಳಲುವವರನ್ನು ದೂರ ಇರಿಸುವುದು ದೊಡ್ಡ ಸವಾಲಾಗಿದೆ. ನಂತರ ಕೊರೊನಾ ಪೀಡಿತರಿಗೆಂದೇ ಪ್ರತ್ಯೇಕ ಆಸ್ಪತ್ರೆಯನ್ನು ಚೀನ ಒಂಬತ್ತು ದಿವಸದಲ್ಲಿ ಮಾಡಿ ಮುಗಿಸಿದೆ.

25,000 ಚದರ ಮೀಟರ್ ವಿಸ್ತೀರ್ಣದ ಆಸ್ಪತ್ರೆಯ ನಿರ್ಮಾಣ ಕಾರ್ಯ ಜನವರಿ 23ಕ್ಕೆ ಆರಂಭವಾಗಿತ್ತು. 1000 ಬೆಡ್‍ಗಳ 1400 ಸಿಬ್ಬಂದಿಗಳಿರುವ ಆಸ್ಪತೆ ಇದು. ಜನವರಿ 23ಕ್ಕೆ ನಿರ್ಮಾಣ ಕಾರ್ಯ ಶುರುವಾಗಿದ್ದು ಅಲ್ಲಿಯವರೆಗೆ 26 ಮಂದಿ ಚೀನದಲ್ಲಿ ಕೊರೊನಾದಿಂದ ಮೃತಪಟ್ಟಿದ್ದರು. ಆಸ್ಪತ್ರೆಯ ಕಾರ್ಯ ನಿರ್ವಹಿಸಲು ಸಿದ್ಧವಾಗುವ ವೇಳೆ ಕೊರೊನಾ ಸಾವಿನ ಸಂಖ್ಯೆ 361 ಆಯಿತು.

ಚೀನ ಇನ್ನೊಂದು 1600 ಬೆಡ್‍ಗಳ ಆಸ್ಪತ್ರೆಯನ್ನು ಕೂಡ ತುರ್ತಾಗಿ ನಿರ್ಮಿಸುತ್ತಿದೆ. ಲೆಐಶೆನ್ಸಾನ್ ಎಂದು ಹೆಸರಿನ ಈ ಆಸ್ಪತ್ರೆಯ ನಿರ್ಮಾಣ ಕಾರ್ಯವನ್ನು ಬುಧವಾರ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.