ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜ. 3: ದಿಲ್ಲಿಯಲ್ಲಿ ಮತದಾನ ದಿನ ಹತ್ತಿರವಾಗುತ್ತಿದ್ದಂತೆಯೇ ಶಾಹೀನ್ ಬಾಗ್ ಕುರಿತು ರಾಜಕೀಯ ಕಾವೇರಿದೆ. ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಬಿಜೆಪಿ ದಿಲ್ಲಿಯಲ್ಲಿ 41ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಶಾಹಿನ್ ಬಾಗ್ ಕಾರಣದಿಂದ ಆರ್ಥಿಕ ಹಿನ್ನಡೆಯಿದ್ದರೂ ಬಿಜೆಪಿ ದಿಲ್ಲಿಯಲ್ಲಿ ವಿಜಯ ಗಳಿಸಲಿದೆ ಎಂದು ಅವರು ಹೇಳಿದರು.
ನಮಗೆ 41 ಸೀಟು ಗೆಲ್ಲುವ ವಿಶ್ವಾಸ ಇದೆ. ದಿಲ್ಲಿಯ ಮತದಾನಕ್ಕೆ ಒಂದು ವಾರಕ್ಕೂ ಕಡಿಮೆ ಸಮಯ ಬಾಕಿ ಉಳಿದಿದೆ. ಬಿಜೆಪಿಯು ಶಾಹೀನ್ ಬಾಗ್ನಲ್ಲಿ ಸಿಎಎಯ ವಿರುದ್ಧ ನಡೆಯುವ ಪ್ರತಿಭಟನೆಯನ್ನು ಮುಖ್ಯ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದೆ. ಬಿಜೆಪಿ ಕೇಜ್ರಿವಾಲ್ ಸರಕಾರ ಮತ್ತು ಕಾಂಗ್ರೆಸ್ ಪಾರ್ಟಿಯ ಸಹಕಾರದಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ಆರೋಪಿಸಿದೆ. ಇದರ ಕಾರಣದಿಂದ ಲಕ್ಷಾಂತರ ಜನರು ಕಷ್ಟಪಡುತ್ತಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.












