ಕೇರಳದಲ್ಲಿ ಇನ್ನೂ ಒಬ್ಬನಿಗೆ ಕೊರೊನಾ; ಇನ್ನೂ ಹೆಚ್ಚು ಮಂದಿಗೆ ಇರಬಹುದು- ಆರೋಗ್ಯ ಸಚಿವೆ

0
837

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಫೆ. 3: ಕೇರಳದಲ್ಲಿ ಮೂರನೇ ವ್ಯಕ್ತಿಗೆ ಕೊರೊನಾ ವೈರಸ್ ತಗಲಿದ್ದು ದೃಢಗೊಂಡಿದೆ. ಕಾಸರಗೋಡು ಕಾಂಞಂಗಾಡಿನ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಕಂಡು ಬಂದಿದೆ ಎಂದು ಆರೋಗ್ಯ ಸಚಿವೆ ಕೆ ಕೆ ಶೈಲಜಾ ವಿಧಾನಸಭೆಗೆ ತಿಳಿಸಿದರು. ರೋಗ ಪೀಡಿತರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅವರು ಹೇಳಿದರು. ಕಾಂಞಂಗಾಡ್ ಜಿಲ್ಲಾಸ್ಪತ್ರೆಯ ಐಸೊಲೇಶನ್ ವಾರ್ಡ್‍ನಲ್ಲಿ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈತ ಚೀನಾದ ವುಹಾನದಿಂದ ಬಂದಿದ್ದರು.

ದೇಶದ ಮೊದಲ ಕೊರೊನಾ ವೈರಸ್ ತೃಶೂರಿನಲ್ಲಿ ದೃಢವಾಗಿತ್ತು. ಎರಡನೆ ಕೊರೊನೊ ಪ್ರಕರಣ ಅಲಪ್ಪೂಝದಿಂದ ವರದಿಯಾಗಿತ್ತು. ವುಹಾನದಲ್ಲಿ ಮೆಡಿಕಲ್ ವಿದ್ಯಾರ್ಥಿಗೆ ಕೊರೊನಾ ಇದ್ದು ಆತನಿಗೆ ಆಲಪ್ಪೂಝ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೀನದಿಂದ ಬಂದ ವಿದ್ಯಾರ್ಥಿನಿಗೆ ತೃಶೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 1999 ಮಂದಿ ಕೊರೊನ ಇದ್ದ ಸ್ಥಳದಿಂದ ಕೇರಳಕ್ಕೆ ಬಂದಿದ್ದಾರೆ. ಇವರಲ್ಲಿ 1994 ಮಂದಿ ಮನೆಗಳಲ್ಲಿ ಮತ್ತು 75 ಮಂದಿಗೆ ಆಸ್ಪತ್ರೆಯಲ್ಲಿ ನಿಗಾ ಇರಿಸಲಾಗಿದೆ.