ಸನ್ಮಾರ್ಗ ವಾರ್ತೆ
ಬೆಂಗಳೂರು, ಫೆ. : ರಾಜ್ಯದಲ್ಲಿ ಕೊರೊನೊ ವೈರಸ್ ಇದೆ ಎಂದು ಶಂಕೆಯಿರುವ 83 ಮಂದಿ ನಿಗಾದಲ್ಲಿದ್ದಾರೆ. ಬೆಂಗಳೂರು, ತುಮಕೂರು, ಮೈಸೂರಿನ ನಿವಾಸಿಗಳ ಮೇಲೆ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು ನಿಗಾ ಇರಿಸಲಾಗಿದೆ. ಕರ್ನಾಟಕ ಆರೋಗ್ಯ, ಕುಟುಂಬ ಕಲ್ಯಾಣ ಸೇವಾ ಇಲಾಖೆಯ ನೇತೃತ್ವದಲ್ಲಿ ಕ್ರಮ ಜರಗಿಸಲಾಗಿದ್ದು, ಆದರೆ, ಪರೀಕ್ಷೆಯಲ್ಲಿ ಕೊರೊನ ವೈರಸ್ ಬಾಧೆ ದೃಢವಾಗಿಲ್ಲ ಎಂದು ಕಮ್ಯೂನಿಕಬಿಲ್ ಡೀಸೀಸ್ ವಿಭಾಗದ ಜಂಟಿ ನಿರ್ದೇಶಕ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ನೆರೆಯ ರಾಜ್ಯಗಳಿಂದ ಬರುವವರನ್ನು ಗಡಿಗಳಲ್ಲಿ ರಾಜ್ಯ ಆರೋಗ್ಯ ಇಲಾಖೆ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೇರಳದಲ್ಲಿ ಮೂವರಿಗೆ ಕೊರೊನ ವೈರಸ್ ಇರುವುದು ಪತ್ತೆಯಾಗಿದೆ.












