ಸಿಎಎ ಪ್ರತಿಭಟಿಸಿ ಬಿಜೆಪಿ ತೊರೆದ 30 ದಲಿತ ಕುಟುಂಬಗಳು

0
1595

ಸನ್ಮಾರ್ಗ ವಾರ್ತೆ

ಕೊಂಡೊಟ್ಟಿ, ಫೆ. 7: ಪೌರತ್ವ ತಿದ್ದುಪಡಿ ಕಾನೂನನ್ನು ಪ್ರತಿಭಟಿಸಿ ಕೇರಳದಲ್ಲಿ ದಲಿತ ಕುಟುಂಬಗಳು ಸಾಮೂಹಿಕವಾಗಿ ಬಿಜೆಪಿ ತೊರೆದಿದ್ದು ಕಿಯಿಶ್ಶೇರಿ ಪುಲ್ಲುಂಚೇರಿ ಕಳಂತಿಗಳ್ ಕಾಲನಿಯ ಮೂವತ್ತರಷ್ಟು ಕುಟುಂಬಗಳು ಬಿಜೆಪಿಗೆ ರಾಜೀನಾಮೆ ನೀಡಿವೆ. ಕಾಲನಿ ಕುಟುಂಬ ಸಮಿತಿ ಕಾರ್ಯದರ್ಶಿ ಬಾಲಸುಬ್ರಮಣ್ಯನ್, ಎಂ ಜಯೇಶ್ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವಿ ತೆಲತ್ತ್ ಎಂಬವರಿಗೆ ಪತ್ರವನ್ನು ನೀಡಿದ್ದಾರೆ.

ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವುದು ನಮಗೆ ಸಹಮತದ ವಿಚಾರವಲ್ಲ. ಆದ್ದರಿಂದ ನಾವು ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸುತ್ತಿದ್ದೇವೆ ಎಂದು ಸಮಿತಿ ಸದಸ್ಯ ಎಂ. ಜಯೇಶ್ ಹೇಳಿದರು. ವರ್ಷಗಳ ಹಿಂದೆ ಸಾಮೂಹಿಕವಾಗಿ ಕಾಲನಿಯ ಕುಟುಂಬಗಳು ಬಿಜೆಪಿಗೆ ಹೋಗಿದ್ದವು. ಇದೇವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವಿ ಕಾಲನಿಯವರ ರಾಜೀನಾಮೆ ಪತ್ರ ಸಿಕ್ಕಿದೆ ಎಂದು ಹೇಳಿದರು. ಕುಟುಂಬ ಸಮಸ್ಯೆಗೆ ಸಂಬಂಧಿಸಿ ಕಾಲನಿಯವರು ವರ್ಷಗಳ ಹಿಂದೆ ಬಿಜೆಪಿಯನ್ನು ಸಂಪರ್ಕಿಸಿದ್ದರು. ಸಹಾಯ ಮಾಡಿದೆವು. ನಂತರ ಅವರು ಬಿಜೆಪಿ ಸೇರಿದ್ದರು. ಈಗ ಆಚೆಯಿಂದ ಹೊಸ ಭರವಸೆ ಸಿಕ್ಕಿದ್ದಾಗಿರಬಹುದು ಎಂದು ಬಿಜೆಪಿ ಕಾರ್ಯದರ್ಶಿ ರವಿ ತೇಲತ್ತ್ ಹೇಳಿದ್ದಾರೆ.