ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 6: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೋರಾಟ ಮಾಡುತ್ತಿರುವ ಶಾಹಿನ್‍ಬಾಗ್ ಮಾನವ ಬಾಂಬುಗಳನ್ನು ಬೆಳೆಸುವ ಸ್ಥಳವಾಗಿ ಬದಲಾಗಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು. ಶಾಹಿನ್ ಬಾಗ್‍ನಲ್ಲಿ ದೇಶದ ವಿರುದ್ಧ ಸಂಚು ನಡೆಯುತ್ತಿದೆ ಎಂದು ಸಚಿವರು ಟ್ವೀಟ್ ಮಾಡಿ ಆರೋಪಿಸಿದ್ದಾರೆ.
ಶಾಹಿನ್ ಬಾಗ್ ಒಂದು ಹೋರಾಟವಲ್ಲ, ಅಲ್ಲಿ ಮಾನವ ಬಾಂಬುಗಳನ್ನು ಸೃಷ್ಟಿಸಲಾಗುತ್ತಿದೆ. ದೇಶದ ರಾಜಧಾನಿ ದೇಶದ ವಿರುದ್ಧ ಸಂಚು ನಡೆಸುತ್ತಿದೆ ಎಂದು ಗಿರಿರಾಜ ಸಿಂಗ್ ಟ್ವೀಟ್‍ನಲ್ಲಿ ಬರೆದಿದ್ದಾರೆ.
ಶಾಹಿನ್ ಬಾಗ್ ಹೋರಾಟಗಾರರ ವಿರುದ್ಧ ಬಿಜೆಪಿ ನಾಯಕರು ಹಲವು ಆರೋಪಗಳನ್ನು ಎತ್ತಿದ್ದಾರೆ. ಶಾಹಿನ್‍ಬಾಗ್ ಮಿನಿ ಪಾಕಿಸ್ತಾನವಾಗಿದೆ ಎಂದು ದಿಲ್ಲಿಯ ವಿಧಾನಸಭೆಯ ಅಭ್ಯಥಿ ಕಪಿಲ್ ಮಿಶ್ರ ವಿವಾದ ಹೇಳಿಕೆ ಈ ಹಿಂದೆ ನೀಡಿದ್ದರು.












