ಸಾರ್ಸನ್ನೂ ಮೀರಿನಿಂತ ಕೊರೊನಾ; ಸಾವಿನ ಸಂಖ್ಯೆ 910

0
717

ಸನ್ಮಾರ್ಗ ವಾರ್ತೆ

ಬೀಜಿಂಗ್, ಫೆ. 10: ಸಾವಿನ ಸಂಖ್ಯೆ ಮತ್ತು ವ್ಯಾಪ್ತಿಯಲ್ಲಿ 2003ರ ಸಾರ್ಸ್‍ನ್ನೂ ಮೀರಿ ಕೊರೊನಾ ವೈರಸ್ ಹಾವಳಿ ನಡೆಸಿದ್ದು ಜಗತ್ತಿನಲ್ಲಿ ಇದುವರೆಗೆ 910 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ರವಿವಾರ 97 ಮಂದಿ ವೈರಸ್‍ಗೆ ಬಲಿಯಾದರು. ನಿನ್ನೆ ಸಂಭವಿಸಿದ್ದು ಈವರೆಗೆ ನಡೆದದ್ದಕ್ಕಿಂತ ಅತಿಹೆಚ್ಚು ಸಾವುಗಳೆಂದು ವರದಿಯಾಗಿದೆ. 910 ಮಂದಿಯ ಪೈಕಿ ಚೀನದ ಹುಬೆ ಪ್ರಾಂತದಲ್ಲಿ 871 ಮಂದಿ ಮೃತಪಟ್ಟಿದ್ದಾರೆ. ಚೀನದ ವಿವಿಧ ಪ್ರದೇಶಗಳಲ್ಲಿ ಈವರೆಗೆ 40,171 ಮಂದಿಗೆ ಕೊರೊನಾ ವೈರಸ್ ತಗಲಿದೆ. ಪಿಲಿಪ್ಪೀನ್ಸ್ ಮತ್ತು ಹಾಂಗ್‍ಕಾಂಗ್‍ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜಗತ್ತಿನಾದ್ಯಂತ ಒಟ್ಟು 40,710 ಮಂದಿಯಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ.

2003ರಲ್ಲಿ 8000 ಮಂದಿ ಸಾರ್ಸ್‍ವೈರಸ್ ಪೀಡಿತರಾಗಿದ್ದರು. ಇವರಲ್ಲಿ 774 ಮಂದಿ ಮೃತಪಟ್ಟಿದ್ದಾರೆ. ಆದರೆ ಸಾರ್ಸ್‍ ಈಗ ಕೊರೊನಾ ಮೀರಿ ನಿಂತಿದೆ. ಆದರೆ ಸಾರ್ಸ್‍ಗಿಂತ ಕೊರೊನಾದ ಮರಣದ ದರ ಕಡಿಮೆಯಾಗಿದೆ. ಅಂದು ಸಾರ್ಸ್ ಪೀಡಿತರಲ್ಲಿ 9.6% ಮಂದಿ ಮೃತಪಟ್ಟಿದ್ದಾರೆ. ಆದರೆ ಕೊರೊನಾದಲ್ಲಿ 2.2% ಸಾವು ಸಂಭವಿಸಿದೆ. ಚೀನದ ಪ್ರತಿಕ್ರಿಯೆ ಅರಿತು ಕೊಂಡು ಕೂಡಲೇ ಚೀನಕ್ಕೆ ವಿಶ್ವಸಂಸ್ಥೇ ಆರೋಗ್ಯ ಏಜೆನ್ಸಿಗಳ ಅಂತಾರಾಷ್ಟ್ರೀಯ ತಂಡವನ್ನು ಕಳುಹಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಘಟನೆ ನಿರ್ದೇಶಕ ಜನರಲ್ ಟೆಡ್ರೋಸ್ ಅಥನೋಂ ಹೇಳಿದ್ದಾರೆ. ಚೀನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ತಮಗೆ ಸಂತೋಷವುಂಟು ಮಾಡಿದೆ ಎಂದು ಹೇಳಿದ್ದಾರೆ.

ಇದೇವೇಳೆ ಕೊರೊನಾ ವೈರಸ್ ನ ಪ್ರತಿರೋಧಕ್ಕೆ ಭಾರತದ ಪ್ರಧಾನಿ ನರೇಂದ್ ರಮೋದಿ ಸಹಾಯದ ಭರವಸೆ ನೀಡಿದ್ದು ಆವರು ಚೀನದ ಅಧ್ಯಕ್ಷ ಶಿ ಜಿನ್‍ಪಿಂಗ್‍ಗೆ ಪತ್ರ ಬರೆದಿದ್ದಾರೆ. ಜೊತೆಗೆ ಹುಬೆ ಪ್ರಾಂತದಲ್ಲಿದ್ದ 650 ಭಾರತೀಯರನ್ನು ಭಾರತಕ್ಕೆ ಕರೆತರಲು ಸಹಾಯ ಮಾಡಿದ್ದಕ್ಕಾಗಿ ಮೋದಿ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.