ಎಸ್. ಐ. ಓ. ರಾಜ್ಯಮಟ್ಟದ ಕಥಾ ಸ್ಪರ್ಧೆ: ಪ್ರಹ್ಲಾದ ಡಿ.ಎಂ. ಅವರ ‘ಹೈನೋರ ಹೊಲ’ ಪ್ರಥಮ

0
1654

ಸನ್ಮಾರ್ಗ ವಾರ್ತೆ

ಬೆಂಗಳೂರು: ವಿಶ್ವ ವಿದ್ಯಾರ್ಥಿ ದಿನದ ಪ್ರಯುಕ್ತ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಕರ್ನಾಟಕ ರಾಜ್ಯ ಘಟಕವು ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯ ತೀರ್ಪು ಪ್ರಕಟಿಸಲಾಗಿದೆ. ಪ್ರಥಮ ಬಹುಮಾನವು ರೂ.10,000 ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ ರೂ.7,000 ಮತ್ತು ನಗದು ಮತ್ತು ಪ್ರಮಾಣ ಪತ್ರ, ತೃತೀಯ ಬಹುಮಾನ ರೂ.5000 ನಗದು ಮತ್ತು ಪ್ರಮಾಣ ಪತ್ರವನ್ನು ಹೊಂದಿದೆ. ಅಲ್ಲದೆ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಕಥೆಗಳಿಗೆ ಬಹುಮಾವನ್ನು ನೀಡಲಾಗುವುದು.

ಪ್ರಥಮ ಬಹುಮಾನಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸಂಶೋಧನ ವಿದ್ಯಾರ್ಥಿ ಪ್ರಹ್ಲಾದ ಡಿ.ಎಂ ರವರ ‘ಹೈನೋರ ಹೊಲ’ ಕನ್ನಡ ಕಥೆ, ದ್ವಿತೀಯ ಬಹುಮಾನಕ್ಕೆ ಸ್ಕೂಲ್ ಆಫ್ ಸೊಶೀಯಲ್ ವರ್ಕ್-ರೋಶನಿ ನಿಲಯ ಕಾಲೇಜು ಮಂಗಳೂರು ಇಲ್ಲಿನ ಪದವಿ ವಿದ್ಯಾರ್ಥಿ ಝಹ್‍ರ ಫಾತಿಮಾ ರವರ ‘ಚಾರ್ಡ್’ (Charred) ಇಂಗ್ಲೀಷ್ ಕಥೆ, ತೃತೀಯ ಬಹುಮಾನಕ್ಕೆ ಸರ್ಕಾರಿ ಯುನಾನಿ ಮಹಾವಿದ್ಯಾಲಯ ಬೆಂಗಳೂರು ಇಲ್ಲಿನ ವೈದ್ಯಕೀಯ ವಿದ್ಯಾರ್ಥಿ ಆನಮ್ ತಸ್ಮೀಯ ರವರ ‘ತಾಹಿರಾಕೆ ಜಝ್‍ಬಾತ್’ ಉರ್ದು ಕಥೆ ಆಯ್ಕೆಯಾಗಿದೆ. ಅಲ್ಲದೆ, ಶ್ರೀ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ ಇಲ್ಲಿನ ವಿದ್ಯಾರ್ಥಿ ವೆಂಕಟೇಶ್ ಪ್ರಸಾದ್ ರಾಮಕೃಷ್ಣ ಹೆಗ್ಡೆ ಬರೆದಿರುವ ‘ಸಿದ್ದಿ ಬೊಂಡ್ಯಾ’, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಳ್ನಾವರ ಇಲ್ಲಿನ ವಿದ್ಯಾರ್ಥಿ ರವಿ.ಉ.ಕಂಬಳಿ ರವರ ‘ಆ ಕರಾಳ ಘಟನೆ’, ಕನ್ನಡ ವಿಶ್ವವಿದ್ಯಾಲಯ ಹಂಪಿ ಇಲ್ಲಿನ ವಿದ್ಯಾರ್ಥಿನಿ ಶಿವರಂಜಿನಿ.ಎ ಬರೆದಿರುವ ‘ಔದಾರ್ಯದ ಕಣ್ಣು’, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇಲ್ಲಿನ ವಿದ್ಯಾರ್ಥಿನಿ ಲಾವಣ್ಯ ಕೆ.ಎಸ್ ರವರ ‘ಹೊಲಿಗೆ’ ಕನ್ನಡ ಕಥೆಗಳು ಹಾಗೂ ಎಂ.ಆರ್ ಮೆಡಿಕಲ್ ಕಾಲೇಜು ಗುಲ್ಬರ್ಗಾ ಇಲ್ಲಿನ ವಿದ್ಯಾರ್ಥಿ ಮುಹಮ್ಮದ್ ಅಬ್ದುಲ್ ಅಝೀಝುದ್ದೀನ್ ರವರ ‘ದಿ ಕಲರ್ ಆಫ್ ಜಸ್ಟಿಸ್’ ಶ್ರೀ ಪೂರ್ಣಪ್ರಜ್ಞಾ ಕಾಲೇಜು ಉಡುಪಿ ಇಲ್ಲಿನ ವಿದ್ಯಾರ್ಥಿನಿ ಕಾವ್ಯ.ಪಿ.ಶೆಟ್ಟಿ ರವರ ‘ಗ್ರೇಸಸ್ ಆಫ್ ದಿ ವರ್ಲ್ಡ್’ ಇಂಗ್ಲೀಷ್ ಕಥೆಗಳು ಮತ್ತು ಗುಲ್ಬರ್ಗಾ ಇನ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಇಲ್ಲಿನ ವಿದ್ಯಾರ್ಥಿ ಮುಹಮ್ಮದ್ ಅಂಜುಮ್ ಇಲ್ಯಾಸ್ ಖುರೇಷಿ ರವರ ‘ಝರಾನಂ ಹೋತೋ ಯೇ ಮಿಟ್ಟಿ ಬಡೀ ಝರ್‍ಕೈಸ್ ಹೈ ಸಾಕಿ’ ಉರ್ದು ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸ್ಪರ್ಧೆಯಲ್ಲಿ ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕರಾದ ಶ್ರೀ ಎ.ಕೆ ಕುಕ್ಕಿಲ, ಅನುಪಮ ಮಹಿಳಾ ಮಾಸಿಕದ ಉಪಸಂಪಾದಕಿ ಶ್ರೀಮತಿ ಶಾಹಿದ ಉಮರ್, ಅಜೀಂ ಪ್ರೇಮ್‍ಜೀ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಶ್ರೀ ಮುಜಾಹಿದುಲ್ ಇಸ್ಲಾಮ್, ಸಂವೇದನ ಫಾರಂ ಫಾರ್ ಆರ್ಟ್, ಕಲ್ಚರ್ ಆ್ಯಂಡ್ ಲಿಟ್ರೇಚರ್ ಇದರ ಕಾರ್ಯದರ್ಶಿಗಳಾದ ಶ್ರೀ ಎಂ.ಡಿ ಚೆಂಡಾಡಿ, ಎಸ್.ಐ.ಓ ಕಾರ್ಯದರ್ಶಿಯಾದ ಶ್ರೀ ಆಸಿಮ್ ಜವಾದ್ ತೀರ್ಪುಗಾರರಾಗಿ ಭಾಗವಹಿಸಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.