ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ.13: ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಕೃತ್ಯಗಳಲ್ಲಿ ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಸರಕಾರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತರಾಟೆಗೆತ್ತಿಕೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಮಹಿಳಾ ವಿರುದ್ಧ ಅಪರಾಧ ಕೃತ್ಯ ದರದಲ್ಲಿ ಹೆಚ್ಚಳವಾಗಿದೆ. ಉತ್ತರ ಪ್ರದೇಶದಲ್ಲಿ ಪ್ರತಿದಿನ ಮಹಿಳೆಯರ ವಿರುದ್ಧ ನಡುಕ ಹುಟ್ಟಿಸುವ ಘಟನೆಗಳು ನಡೆಯುತ್ತಿವೆ. ಫಿರೋಝಾಬಾದಿನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ತಂದೆಯ ಹತ್ಯೆ ನಡೆಯಿತು. ಸೀತಾಪುರದಲ್ಲಿ ಪುಟ್ಟ ಹೆಣ್ಣು ಮಗವನ್ನು ಅತ್ಯಾಚಾರಕ್ಕೊಳಪಡಿಸಿ ಕೊಲ್ಲಲಾಯಿತು. ಎಲ್ಲಿದೆ ಸರಕಾರ? ಬಿಜೆಪಿಯ ಅಧೀನದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಆದರೆ ಅವರು ಅದರ ಹೊಣೆಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶ ಕಾಂಗ್ರೆಸ್ನ ಹೊಣೆಯಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾ೦ಕ ಕಬ್ಬು ಬೆಳೆಗಾರರ ಬಾಕಿ ಸಾಲ, ಬುಂದೇಲ್ಖಂಡದ ರೈತರ ಆತ್ಮಹತ್ಯೆ , ಅಲೆಮಾರಿ ಹಸುಗಳ ವಿಷಯದಲ್ಲಿ ಉತ್ತರಪ್ರದೇಶ ಸರಕಾರವನ್ನು ತರಾಟೆಗೆತ್ತಿಕೊಂಡರು. ಇತ್ತೀಚೆಗೆ ಆದಿತ್ಯನಾಥ್ ಗಂಡು ಮಕ್ಕಳು, ಹೆಣ್ಣುಮಕ್ಕಳ ನಡುವೆ ತಾರತಮ್ಯ ಆಗಬಾರದು. ಮಹಿಳೆಯರ ವಿರುದ್ಧ ಅಪರಾಧ ವಿಚಾರಣೆಗೆ 218 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.












