ಹಿಟ್ಲರ್ ಪಾರ್ಟಿಯೊಂದಿಗೆ ರಹಸ್ಯ ಸಂಬಂಧ: ಜರ್ಮನಿಯ ಆಡಳಿತ ಪಕ್ಷದ ಅಧ್ಯಕ್ಷೆ ವಜಾ

0
577

ಸನ್ಮಾರ್ಗ ವಾರ್ತೆ

ಬರ್ಲಿನ್, ಫೆ. 14: ಹಿಟ್ಲರ್ ಪಾರ್ಟಿಯೊಂದಿಗೆ ರಹಸ್ಯ ಸಂಬಂಧ ಇರಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕ್ರಿಸ್ಚಿಯನ್ ಡೆಮಕ್ರಾಟ್ ಯೂನಿಯನ್ ಪಕ್ಷದ ಅಧ್ಯಕ್ಷೆ ಅನೆಗ್ರೇಟ್ ಕ್ರಾಂಬ್ ಕಾರ್ನಬವರ್ ರಾಜೀನಾಮೆ ನೀಡಿದ್ದಾರೆ. ನಾಝಿ ಆಶಯದ ಪಾರ್ಟಿಯೊಂದಿಗೆ ಸಂಬಂಧ ಬೆಳೆಸಿದ್ದಕ್ಕೆ ಅವರನ್ನು ವಜಾ ಮಾಡಲಾಗಿತ್ತು. ಇದರ ಬೆನ್ನಿಗೆ ಅವರು ರಾಜೀನಾಮೆ ನೀಡಿದ್ದಾರೆ. ಚಾನ್ಸಲರ್ ಆಂಗೆಲಾ ಮಾರ್ಕೆಲರ್ ನಂತರ ಜರ್ಮನಿಯ ಚಾನ್ಸಲರ್ ಆಗುವ ಮಹಿಳೆ ಎಂದು ಅನೆಗ್ರೆಟ್ ಕ್ರಾಂಬ್‍ರನ್ನು ಹೇಳಲಾಗುತ್ತಿತ್ತು.

ಐವತ್ತೆಂಟು ವರ್ಷದ ಅನೆಗ್ರೇಟಾ ರಕ್ಷಣಾ ಸಚಿವೆ ಕೂಡ ಆಗಿದ್ದರು. ಮುಂದಿನ ಬಾರಿ ಚಾನ್ಸಲರ್ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಕಳೆದ ವಾರ ಮಾಜಿ ಈಸ್ಟ್ ಜರ್ಮನಿಯ ಮುಖ್ಯಮಂತ್ರಿ ಅಭ್ಯರ್ಥಿ ಚುನಾವಣೆಯಲ್ಲಿ ಈಗಿನ ಮುಖ್ಯಮಂತ್ರಿ ಬೊಡೊ ರೊಮಲೊವ್‍ರನ್ನು ಸೋಲಿಸಲು ನಾಝಿ ಪಾರ್ಟಿಯೊಂದಿಗೆ ಅವರು ರಹಸ್ಯ ಸಂಬಂಧ ಸ್ಥಾಪಿಸಿದ್ದು ಬಹಿರಂಗವಾಗಿದೆ. ನಂತರ ಹೊಸ ಬೆಳವಣಿಗೆಗಳು ನಡೆದಿವೆ. ಬಹಳ ಬೇಗನೇ ನೇತೃತ್ವ ಸ್ಠಾನಕ್ಕೆ ಅನಗ್ರೇಟ್ ತಲುಪಿದ್ದರು. ಜೊತೆಗೆ ಚಾನ್ಸಲರ್ ಅಂಗೇಲಾ ಮಾರ್ಕೆಲ್‍ರ ನಿಕಟವರ್ತಿಯಾಗಿದ್ದರು. ಎಕೆಎ ಎನ್ನಲಾಗುತ್ತಿದ್ದ ಅನೆಗ್ರೆಟಾರ ಪತನ ರಾಜಕೀಯ ಕೇಂದ್ರಗಳಲ್ಲಿ ಅಚ್ಚರಿಗೆ ಕಾರಣವಾಗಿದೆ.