ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ಮೋದಿಯನ್ನು ಆಹ್ವಾನಿಸಿದ ಕೇಜ್ರಿವಾಲ್

0
856

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 24: ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಅರವಿಂದ್ ಕೇಜ್ರಿವಾಲ್ ಆಹ್ವಾನಿಸಿದ್ದಾರೆ. ರವಿವಾರ ರಾಮಲೀಲಾ ಮೈದಾನದಲ್ಲಿ ಎಎಪಿ ಸರಕಾರ ಪ್ರಮಾಣವಚನ ಸ್ವೀಕರಿಸಲಿದ್ದು 51ವರ್ಷದ ಕೇಜ್ರಿವಾಲ್ ಮೂರನೇ ಬಾರಿಗೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಅಧಿಕೃತವಾಗಿ ಪ್ರಧಾನಿಗೆ ಆಹ್ವಾನ ಕಳುಹಿಸಲಾಗಿದ್ದರೂ ಅವರು ಭಾಗವಹಿಸುವರೇ ಎಂಬುದು ಖಚಿತವಾಗಿಲ್ಲ.

ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮತ್ತು ರಾಜಕೀಯ ನಾಯಕರನ್ನು ಪ್ರಮಾಣವಚನಕ್ಕೆ ಕರೆಯುವುದಿಲ್ಲ ಎಂದು ಎಎಪಿ ದಿಲ್ಲಿ ಘಟಕ ಸಂಯೋಜಕ ಗೋಪಾಲ ರಾಯ್ ಈ ಹಿಂದೆ ತಿಳಿಸಿದ್ದರು. ಎಎಪಿ ಮತ್ತು ಕೇಜ್ರಿವಾಲ್‍ರಲ್ಲಿ ನಂಬಿಕೆ ಇರಿಸಿದ ಜನರ ಜೊತೆ ಅವರು ಪ್ರಮಾಣವಚನ ಸ್ವೀಕರಿಸುವರೆಂದು ರಾಯ್ ತಿಳಿಸಿದರು.

ದಿಲ್ಲಿಯಲ್ಲಿ 70 ವಿಧಾನಸಭಾ ಸದಸ್ಯರಿದ್ದು ಇದರಲ್ಲಿ 62 ಸೀಟುಗಳಲ್ಲಿ ಆಮ್ ಆದ್ಮಿಪಾರ್ಟಿ ಗೆದ್ದಿದೆ. ಸಚಿವ ಸಂಪುಟದಲ್ಲಿ ಅತಿಶಿ, ರಾಘವ್ ಚಡ್ಡರಂತಹ ಹೊಸ ಮುಖಗಳಿರಲಿವೆ ಎಂಬ ಸೂಚನೆಯಿದೆ.