ಸೇನೆಯ ಅಮೂಲಾಗ್ರ ಸುಧಾರಣೆಗೆ ಮುಂದಾದ ಜನರಲ್ ಬಿಪಿನ್ ರಾವತ್

0
461

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಫೆ. 18: ಭವಿಷ್ಯದ ಸುರಕ್ಷೆಯ ಸವಾಲುಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಭಾರತದ ಸೇನೆಯ ಅಮೂಲಾಗ್ರ ಸುಧಾರಣೆ ನಡೆಯಬೇಕಿದೆ ಎಂದು ಜಂಟಿ ಸೇನೆಯ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಉತ್ತರ- ಪಶ್ಚಿಮ ಭಾಗಗಳಿಂದ ಬೆದರಿಕೆ ಎದುರಿಸಲು ಎರಡರಿಂದ ಐದರಷ್ಟು ಥಿಯೇಟರ್ ಕಮಾಂಡುಗಳನ್ನು ರೂಪಿಸಬೇಕು. 2022ರಲ್ಲಿ ಮೊದಲನೆಯ ಕಮಾಂಡುಗಳು ಕಾರ್ಯಪ್ರವೃತ್ತವಾಗಲಿದೆ ಎಂದು ಅವರು ಹೇಳಿದರು. ಜಮ್ಮು ಕಾಶ್ಮೀರಕ್ಕೆ ಮಾತ್ರ ಇನ್ನೊಂದು ಥಿಯೇಟರ್ ಕಮಾಂಡ್ ಇರಲಿದೆ. ಅಮೆರಿಕದ ಮಾದರಿಯಲ್ಲಿ ಸೈನಿಕರಿಗೆ ತರಬೇತಿ ನೀಡಲಾಗುವುದು. ಕಮಾಂಡ್ ರೂಪಿಸಲಾಗುವುದು. ಭೂಸೇನೆ, ನಾವಿಕ ಸೇನೆ, ವಾಯುಸೇನೆಗಳು ಸಹಿತ ಸೈನಿಕ ಯುನಿಟ್‍ಗಳು ಥಿಯೇಟರ್ ಕಮಾಂಡ್ ಆಗಿವೆ. ಈಗ ದೇಶದಲ್ಲಿ ಪ್ರತಿಯೊಂದು ಸೇನೆಯ ವಿಭಾಗಕ್ಕೆ ದೇಶದಲ್ಲಿ ಬೇರೆ ಬೇರೆ ಕಮಾಂಡುಗಳಿವೆ. ನೌಕಾ ಸೇನೆಯ ಪೂರ್ವ ಪಶ್ಚಿಮ ಕಮಾಂಡುಗಳನ್ನು ಸಂಯೋಜನೆಗೊಳಿಸಿ ಭಾರತ ಮಹಾಸಮುದ್ರದ ಸುರಕ್ಷೆಗೆ ಒಂದು ಯುನಿಟನ್ನು ರೂಪೀಕರಿಸಲಾಗುವುದು. ಇದು ನೌಕಾ ಸೇನೆಯ ಮುಖ್ಯಸ್ಥರ ಅಧೀನದಲ್ಲಿ ಕಾರ್ಯವೆಸಗಲಿದೆ ಎಂದು ರಾವತ್ ಹೇಳಿದರು.

ಪೆನಿನ್‍ಸುಲಾರ್ ಕಮಾಂಡ್ ಎಂದು ಇದಕ್ಕೆ ಹೆಸರಿದ್ದು ಇದರ ಮುಖ್ಯಸ್ಥರಿಗೆ ದಿಲ್ಲಿಯಿಂದ ನಿರ್ದೇಶಗಳನ್ನು ಕಾಯದೆ ಯುದ್ಧ ಹಡಗಿನ ಪ್ರಯಾಣ ಇತ್ಯಾದಿಗಳನ್ನು ತೀರ್ಮಾನಿಸಬಹುದಾಗಿದೆ ಎಂದು ಅವರು ತಿಳಿಸಿದರು